National

ಅಲ್ಲು ಅರ್ಜುನ್‌ ಕಾರಿಗೆ ಟಿಂಟೆಡ್‌ ಗ್ಲಾಸ್‌ ಬಳಕೆ; 700 ರೂ. ದಂಡ ವಿಧಿಸಿದ ಪೊಲೀಸರು

ಹೈದರಾಬಾದ್‌: ಉಳ್ಳವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ ಕೊಡ್ತಾರೆ ಎಂಬ ಆರೋಪವಿದೆ. ಆದ್ರೆ, ಹೈದರಾಬಾದ್‌ ಟ್ರಾಫಿಕ್‌ ಪೊಲೀಸರು ಈ ಆರೋಪಕ್ಕೆ ವ್ಯತಿರಿಕ್ತ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಹೈದರಾಬಾದ್‌ ಟ್ರಾಫಿಕ್‌ ಪೊಲೀಸರು ಖ್ಯಾತ ಸಿನಿಮಾ ನಟ ಅಲ್ಲು ಅರ್ಜುನ್‌ಗೆ ದಂಡ ವಿಧಿಸಿದ್ದಾರೆ. ನಿಷೇಧಿತ ಟಿಂಟೆಡ್‌ ಗ್ಲಾಸ್‌ ಇರುವ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಟ ಅಲ್ಲು ಅರ್ಜುನ್‌ ಕಾರು ತಡೆದು ಪೊಲೀಸರು, 700 ರೂಪಾಯಿ ದಂಡ ವಿಧಿಸಿದ್ದಾರೆ.

ಶನಿವಾರ  ಹೈದರಾಬಾದ್​ನ ನೀರುಸ್ ಸರ್ಕಲ್​ ಬಳಿ ಅಲ್ಲು ಅರ್ಜುನ್​ ಅವರ ರೇಂಜ್​ ರೋವರ್ ಕಾರನ್ನು ತಡೆಯಲಾಗಿದೆ. ಗ್ಲಾಸ್​ಗೆ ಇದ್ದ ಟಿಂಟ್ ಇದ್ದಿದ್ದರಿಂದ ದಂಡ ವಿಧಿಸಲಾಗಿದೆ. ನಂತರ ಸ್ಥಳದಲ್ಲೇ ಟಿಂಟ್‌ನ್ನು ತೆಗೆಯಲಾಗಿದೆ. ಅಂದೇ ಮತ್ತೊಬ್ಬ ನಟ ನಂದಮೂರಿ ಕಲ್ಯಾಣ್​ ರಾಮ್​ ಕಾರಿಗೂ ಟಿಂಟ್‌ ಇದ್ದಿದ್ದರಿಂದ ದಂಡ ವಿಧಿಸಲಾಗಿದೆ.

 

Share Post