CrimeNational

ರೈಲಿನಲ್ಲಿ ಬಾಲಕಿ ಕೈಯಿಂದ ಮೊಬೈಲ್‌ ಕಿತ್ತುಕೊಂಡ ಕಳ್ಳ!

ನವದೆಹಲಿ; ಈಗ ಮಕ್ಕಳು ಮೊಬೈಲ್‌ ಇಲ್ಲದೆ ಇರೋದೇ ಇಲ್ಲ.. ಅವರ ಕೈಗೆ ಮೊಬೈಲ್‌ ಕೊಡದೇ ಹೋದರೆ ಹುಚ್ಚರಂತೆ ಆಡುತ್ತಾರೆ.. ಹೀಗಾಗಿ ಮಕ್ಕಳನ್ನು ಸಮಾಧಾನಪಡಿಸೋದಕ್ಕೆ ಪೋಷಕರು ಕೂಡಾ ಅವರಿಗೆ ಮೊಬೈಲ್‌ ಅಡಿಕ್ಟ್‌ ಮಾಡಿಸಿಬಿಟ್ಟಿದ್ದಾರೆ.. ಅದೇ ರೀತಿ ರೈಲಿನಲ್ಲಿ ಹೋಗುವಾಗ ಕಿಟಕಿ ಪಕ್ಕ ಕುಳಿತು ಮೊಬೈಲ್‌ ನೋಡುತ್ತಿದ್ದ ಬಾಲಕಿಯ ಕೈಯಿಂದ ಕಳ್ಳ ಮೊಬೈಲ್‌ ಕಿತ್ತುಕೊಂಡು ಹೋಗಿದ್ದಾನೆ.. ಈ ದೃಶ್ಯ ಬೇರೊಬ್ಬರ ಮೊಬೈಲ್‌ ನಲ್ಲಿ ಸೆರೆಯಾಗಿದೆ..
ಈ ಘಟನೆ ಎಲ್ಲಿ ನಡೆಯಿತೋ ಗೊತ್ತಿಲ್ಲ.. ಆದ್ರೆ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.. ರೈಲು ನಿಧಾನವಾಗಿ ಚಲಿಸುತ್ತಿತ್ತು.. ಬಾಲಕಿ ಯಾವುದರ ಗೊಡವೆಯೂ ಇಲ್ಲದೆ ರೈಲಿನ ಕಿಟಕಿ ಪಕ್ಕ ಕುಳಿತು ಮೊಬೈಲ್‌ನಲ್ಲಿ ಮಗ್ನಳಾಗಿದ್ದಳು.. ಈ ವೇಳೆ ಇದ್ದಕ್ಕಿದ್ದಂತೆ ಬಂದ ಕಳ್ಳ ಮೊಬೈಲ್‌ ಕಿತ್ತುಕೊಂಡು ಎಸ್ಕೇಪ್‌ ಆಗಿದ್ದಾನೆ..
ದೃಶ್ಯಗಳಲ್ಲಿ ಬಾಲಕಿಯಿಂದ ಕಳ್ಳ ಮೊಬೈಲ್‌ ಕಿತ್ತುಕೊಳ್ಳುವ ದೃಶ್ಯಗಳನ್ನು ನಾವು ಕಾಣಬಹುದಾಗಿದೆ.. ಬಾಲಕಿ ಕೂಡಾ ಮೊಬೈಲ್‌ ಕಸಿದುಕೊಳ್ಳದಂತೆ ತಡೆಯಲು ಪ್ರಯತ್ನಿಸುತ್ತಾಳೆ.. ಆದ್ರೆ ಯಾವುದೇ ಪ್ರಯೋಜನವಾಗುವುದಿಲ್ಲ.. ಕಳ್ಳ ತನ್ನ ಚಾಲಾಕಿತನದಿಂದ ಮೊಬೈಲ್‌ ಕಿತ್ತುಕೊಂಡು ಎಸ್ಕೇಪ್‌ ಆಗುತ್ತಾನೆ.. ಅಷ್ಟೊತ್ತಿಗೆ ರೈಲಿನ ಸ್ಪೀಡ್‌ ಕೂಡಾ ಹೆಚ್ಚಾಗುತ್ತದೆ.. ಇದರಿಂದ ಯಾರಿಗೂ ಏನೂ ಮಾಡಲು ಆಗುವುದಿಲ್ಲ..

Share Post