NationalPolitics

ಹಕ್ಕು ಚಲಾಯಿಸಿದ ಮತದಾರನಿಗೆ ಸಿಕ್ತು ವಜ್ರದುಂಗುರದ ಗಿಫ್ಟ್‌!

ಭೋಪಾಲ್‌; ನಮ್ಮ ಜನಕ್ಕೆ ಮತದಾನ ಎಂದರೆ ಅದೇನೋ ತಾತ್ಸಾರ.. ಅದರಲ್ಲೂ ಸಿಟಿ ಜನ ಮನೆಯಿಂದ ಹೊರಗೇ ಬರೋದಿಲ್ಲ.. ಹೀಗಾಗಿಯೇ ಹಲವಾರು ಕಡೆ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ.. ಇದರಿಂದ ಗೆಲ್ಲಬೇಕಾದ ವ್ಯಕ್ತಿ ಸೋಲುತ್ತಿದ್ದಾರೆ… ಸೋಲಬೇಕಾದ ವ್ಯಕ್ತಿ ಗೆಲ್ಲುತ್ತಿದ್ದಾರೆ.. ಹೀಗಾಗಿ, ಜನರನ್ನು ಆಕರ್ಷಿಸಲು ಮತದಾನ ಮಾಡುವಂತೆ ಮಾಡಲು ಹಲವಾರು ಪ್ರಯತ್ನಗಳು ನಡೆಯುತ್ತವೆ.. ಬೆಂಗಳೂರಿನಲ್ಲಿ ಮತದಾನ ಮಾಡಿದವರಿಗೆ ಕೆಲವು ಹೋಟೆಲ್‌ನವರು ಉಚಿತ ತಿಂಡಿ ವ್ಯವಸ್ಥೆಗಳನ್ನು ಮಾಡುತ್ತಾರೆ.. ಆದ್ರೆ ಭೋಪಾಲ್‌ ನಲ್ಲಿ ಮತದಾನ ಮಾಡಿದ ಅದೃಷ್ಟವಂತರಿಗೆ ವಜ್ರದ ಉಂಗುರವನ್ನೇ ಉಡುಗೊರೆಯಾಗಿ ನೀಡಲಾಗಿದೆ..

ಭೋಪಾಲ್‌ ನಗರದ ಪ್ರತಿ ಬೂತ್‌ನಲ್ಲೂ ಮತದಾನ ಪ್ರಮಾಣ ಕಡಿಮೆಯಾಗುತ್ತಿತ್ತು.. ಹೀಗಾಗಿ ಅಲ್ಲಿನ ಸ್ಥಳೀಯ ಆಡಳಿತ ಈ ಬಾರಿ ಮತದಾರರನ್ನು ಸೆಳೆಯಲು ಒಂದು ಆಫರ್‌ ನೀಡಲಾಗಿತ್ತು.. ಮತದಾನ ಮಾಡಿದವರ ಹೆಸರುಗಳನ್ನು ಲಕ್ಕ ಡ್ರಾ ಮಾಡಿ, ಉಜ್ರದ ಉಂಗುರ ಸೇರಿದಂತೆ ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡಲಾಗಿತ್ತು.. ಪ್ರತಿ ಬೂತ್‌ ನಲ್ಲಿ ಲಕ್ಕಿ ಡ್ರಾ ಮಾಡುವ ವ್ಯವಸ್ಥೆ ಮಾಡಲಾಗಿತ್ತು..

ಹೀಗೆ ಮಾಡಲಾದ ಲಕ್ಕಿ ಡ್ರಾದಲ್ಲಿ ಓರ್ವ ಮತದಾರನಿಗೆ ವಜ್ರದ ಉಂಗುರ ಸಿಕ್ಕಿದೆ. ಲಕ್ಕಿ ಡ್ರಾನಲ್ಲಿ ಮೂವರು ಮತದಾರರು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ..

 

Share Post