National

ಗೂಗಲ್‌ ಮ್ಯಾಪ್‌ ನಂಬಿ ಹೋಗಿದ್ದಕ್ಕೆ ಹಳ್ಳಕ್ಕೆ ನುಗ್ಗಿದ ಕಾರು; ಮುಂದೇನಾಯ್ತು..?

ತಿರುವನಂತಪುರ; ಗೂಗಲ್‌ ಮ್ಯಾಪ್‌ ನಂಬಿ ಕಾರು ಚಲಾಯಿಸಿದವರಿಗೆ ಸಂಕಷ್ಟ ಎದುರಾಗಿದೆ.. ಗೂಗಲ್‌ ಮ್ಯಾಪ್‌ ತೋರಿಸಿದಂತೆ ಹೋಗಿದ್ದರಿಂದ ಕಾರು ನೇರವಾಗಿ ಒಂದು ನೀರಿನ ಹೊಂಡಕ್ಕೆ ಇಳಿದಿದೆ.. ಕೇರಳದ ಅಳಪ್ಪುಳ ಬಳಿ ಈ ದುರ್ಘಟನೆ ನಡೆದಿದ್ದು, ಕೇರಳ ಪ್ರವಾಸಕ್ಕೆ ತೆರಳಿದ್ದ ಹೈದರಾಬಾದ್‌ನ ನಾಲ್ವರು ತೀವ್ರ ಸಂಕಷ್ಟ ಎದುರಿಸಿದ್ದಾರೆ..

ಫೋರ್ಡ್‌ ಎಂಡೌರ್‌ ಕಾರಿನಲ್ಲಿ ಹೈದರಾಬಾದ್‌ನ ನಾಲ್ವರು ವ್ಯಕ್ತಿಗಳು ಗೂಗಲ್‌ ಮ್ಯಾಪ್‌ ಹಾಕಿಕೊಂಡು ಕೇರಳದ ಅಳಪ್ಪುಳಕ್ಕೆ ಹೋಗುತ್ತಿದ್ದಾರೆ.. ಈ ವೇಳೆ ಗೂಗಲ್‌ ಮ್ಯಾಪ್‌ ತೋರಿಸಿದಂತೆ ಹೋದಾಗ ಕಾರು ಸೀದಾ ಹಳ್ಳವೊಂದಕ್ಕೆ ನುಗ್ಗಿದೆ.. ಕಾರಿನಲ್ಲಿ ಒಬ್ಬ ಮಹಿಳೆ ಸೇರಿದಂತೆ ನಾಲ್ವರು ವ್ಯಕ್ತಿಗಳಿದ್ದರು.. ಕಾರು ಹಳ್ಳಕ್ಕೆ ನುಗ್ಗುತ್ತಿದ್ದಂತೆ ಓರ್ವ ವ್ಯಕ್ತಿ ಸಹಾಯಕ್ಕಾಗಿ ಕೂಗಿದ್ದಾನೆ.. ಸ್ಥಳೀಯರು ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ..

ಹಗ್ಗ ಕಟ್ಟಿ ಎಲ್ಲರನ್ನೂ ಮೊದಲು ದಡಕ್ಕೆ ಸೇರಿಸಿದ್ದಾರೆ.. ಅನಂತರ ಅಗ್ನಿಶಾಮಕ ಸಿಬ್ಬಂದಿ ಬಂದು ಕಾರನ್ನು ಹೊರಗೆ ತೆಗೆದಿದ್ದಾರೆ.. ಅದೃಷ್ಟವಶಾತ್‌ ನಾಲ್ವರೂ ಪ್ರಾಣಾಪಾದಿಂದ ಪಾರಾಗಿದ್ದಾರೆ..

 

Share Post