ಬಂಧಿಸಲು ಹೋದ ಮೂವರು ಪೊಲೀಸರನ್ನೇ ಹತ್ಯೆ ಮಾಡಿದ ದುಷ್ಕರ್ಮಿಗಳು..!
ದುಷ್ಕರ್ಮಿಗಳು ಪೊಲೀಸರ ಮೇಲೆ ದಾಳಿ ಮಾಡುವುದು, ಅವರನ್ನು ಕೊಲೆ ಮಾಡುವುದು ಆಗಾಗ ಸುದ್ದಿಯಾಗುತ್ತಿರುತ್ತದೆ. ಈಗ ಅಂತಹದ್ದೇ ಒಂದು ಸುದ್ದಿಯಾಗಿದೆ. ದುಷ್ಕರ್ಮಿಗಳು ಬಂಧಿಸಲು ಬಂದ ಮೂವರು ಪೊಲೀಸರನ್ನೇ ಹತ್ಯೆ ಮಾಡಿದ್ದಾರೆ. ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಇಂತಹದ್ದೊಂದು ಭೀಕರ ಕೃತ್ಯ ಎಸಗಲಾಗಿದೆ.
ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಿಂದ ಸುಮಾರು 160 ಕಿಲೋ ಮೀಟರ್ ದೂರದ ಆರಾಜ್ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಈ ಕೃತ್ಯ ಎಸಗಲಾಗಿದೆ. ಇಂದು ಬೆಳಗಿನಜಾವ ಮೂರು ಗಂಟೆ ಸುಮಾರಿಗೆ ಪೊಲೀಸರು, ಜಿಂಕೆಗಳನ್ನು ಕೊಂದಿದ್ದ ದುಷ್ಕರ್ಮಿಗಳನ್ನು ಬಂಧಿಸಲು ಹೀಗಿದ್ದರು. ಈ ವೇಳೆ ಪ್ರತಿದಾಳಿ ನಡೆಸಿದ ದುಷ್ಕರ್ಮಿಗಳು ಮೂವರು ಪೊಲೀಸರನ್ನು ಹತ್ಯೆಗೈದಿದ್ದಾರೆ.
ಅಪರೂಪದ ನಾಲ್ಕು ಜಿಂಕೆಗಳನ್ನು ದುಷ್ಕರ್ಮಿಗಳು ಕೊಂದಿದ್ದಾರೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ, ಗುನಾ ಜಿಲ್ಲೆಯ ಅರೋನ್ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಥಳವೊಂದಕ್ಕೆ ತೆರಳಿ, ಆರೋಪಿಗಳನ್ನು ಸುತ್ತುವರೆದಿದ್ದರು. ಆಗ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಮೂವರು ಪೊಲೀಸರು ಮೃತಪಟ್ಟಿದ್ದಾರೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ಜಾತವ್ ಮತ್ತು ಕಾನ್‌ಸ್ಟೆಬಲ್‌ಗಳಾದ ನಿಲೇಶ್ ಭಾರ್ಗವ, ಶಾಂತಾರಾಮ್ ಮೀನಾ ಮೃತಪಟ್ಟ ಪೊಲೀಸರು.