HealthNational

ಚಾರಣಕ್ಕೆ ರಾಜ್ಯದ ಐವರು ಸೇರಿ 9 ಮಂದಿ ದುರ್ಮರಣ!; ಚಾರಣಕ್ಕೆ ಹೋದವರ ಪೂರ್ಣ ಮಾಹಿತಿ

ಉತ್ತರಾಖಂಡ್; ಇಲ್ಲಿ ​​ ಸಹಸ್ತ್ರ ತಾಳ್ ಶಿಖರದ ಚಾರಣಕ್ಕೆ ತೆರಳಿದ್ದ ಬೆಂಗಳೂರಿನ 22 ಚಾರಣಿಗರು ಹಿಮದ ನಡುವೆ ಸಿಲುಕಿದ್ದಾರೆ.. ಇದರಲ್ಲಿ ಐವರು ಕನ್ನಡಿಗರು ಸೇರಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.. ಐವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದ ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿದೆ.. ಸಮಾರೋಪಾದಿಯಲ್ಲಿ ಚಾರಣಿಗರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.. ರಾಜ್ಯದಿಂದ ಸಚಿವ ಕೃಷ್ಣ ಬೈರೇಗೌಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.. ಕರ್ನಾಟಕ ಸರ್ಕಾರ ನಿರಂತರ ಸಂಪರ್ಕದಲ್ಲಿದೆ..

13 ಮಂದಿ ಚಾರಣಿಗರನ್ನು ರಕ್ಷಣೆ ಮಾಡಲಾಗಿದ್ದು, ವಿವಿಧ ಸ್ಥಳಗಳಿಗೆ ಅವರನ್ನು ಸ್ಥಳಾಂತರ ಮಾಡಲಾಗಿದೆ.. ಹವಾಮಾನ ವೈಪರಿತ್ಯದಿಂದ ಚಾರಣಿಗರು ಹಿಮದಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ.. ಕರ್ನಾಟಕದಿಂದ ಹೋಗಿದ್ದ 22 ಜನರ ಚಾರಣಿಗರ ತಂಡ ಉತ್ತರಾಖಂಡದ ಎತ್ತರದ ಶಾಸ್ತ್ರತಾಳ್ ಮಯಳಿ ಪ್ರದೇಶಕ್ಕೆ ತೆರಳಿ, ಅಲ್ಲಿಂದ ಚಾರಣ ಆರಂಭಿಸಿತ್ತು. ಟ್ರಕ್ಕಿಂಗ್​ ಹೋದ 22 ಜನರ ಪೈಕಿ, 19 ಮಂದಿ ಬೆಂಗಳೂರಿನವರು. ಉಳಿದ ಮೂವರು ಮಹಾರಾಷ್ಟ ಮೂಲದ ಗೈಡ್​ಗಳು.. ಚಾರಣದ ಗಮ್ಯಸ್ಥಾನವನ್ನು ತಲುಪಿದ ತಂಡ ಮತ್ತೆ ಶಿಬಿರಕ್ಕೆ ಹಿಂತಿರುಗುತ್ತಿತ್ತು.. ಈ ವೇಳೆ ದುರಂತ ನಡೆದಿದೆ..

9 ಮಂದಿ ಮೃತರ ಪೈಕಿ ಕರ್ನಾಟಕದ ಐವರು, ಮಹಾರಾಷ್ಟ್ರದ ಮೂವರು ಎಂದು ಗೊತ್ತಾಗಿದೆ.. ಇನ್ನೊಬ್ಬರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ..

ಹೊರತೆಗೆಯಲಾದ ಮೃತದೇಹಗಳ ಮಾಹಿತಿ

==========================

ಸುಜಾತ ಮುನ್ಗೂರ್ವಾಡಿ

ವಿನಾಯಕ್ ಮುನ್ಗೂರ್ವಾಡಿ

ಸಿಂಧು

ಆಶಾ ಸುಧಾಕರ್

ಚೈತ್ರಾ ಪ್ರಣೀತ್

ಇನ್ನೂ ಪತ್ತೆಯಾಗದ ಮೃತದೇಹಗಳು

  1. ಅನಿತಾ ರಂಗಪ್ಪ
  2. ಪದ್ಮಿನಿ ಹೆಗ್ಡೆ
  3. ವೆಂಕಟೇಶ್ ಪ್ರಸಾದ್ ಕೆ.ಎನ್

 

ಡೆಹ್ರಾಡೂನ್​ಗೆ ಸ್ಥಳಾಂತರವಾದ ಪ್ರವಾಸಿಗರು;

  1. ಸೌಮ್ಯ ಕನಾಳೆ
  2. ಸ್ಮೃತಿ ಡೊಲಾಸ್
  3. ಸೀನಾ ಲಕ್ಷ್ಮಿ
  4. ಎಸ್ ಶಿವಜ್ಯೋತಿ
  5. ಅನೀಲ್ ಭಟ್
  6. ಭರತ್ ಬೊಮ್ಮ‌ನಗೌಡರ್
  7. ಮಧು ಕಿರಣ್ ರೆಡ್ಡಿ
  8. ಜಯಪ್ರಕಾಶ್.ಬಿ.ಎಸ್.

ಬಟ್ವಾಡಿ ಪ್ರದೇಶದಲ್ಲಿರುವವರು;

  1. ಎಸ್ ಸುಧಾಕರ್
  2. ವಿನಾಯಕ್ ಎಂಕೆ
  3. ವಿವೇಕ್ ಶ್ರೀಧರ್

ಸಿಲ್ಲಾ ಹಳ್ಳಿಗೆ ಮರಳಿದ ಪ್ರವಾಸಿಗರ ವಿವರ

  1. ನವೀನ್ ಎ
  2. ರಿತಿಕಾ ಜಿಂದಾಲ್

 

Share Post