2024ರಲ್ಲಿ 68 ರಾಜ್ಯಸಭಾ ಸದಸ್ಯರು ನಿವೃತ್ತಿ; 9 ಕೇಂದ್ರ ಸಚಿವರೂ ಸೇರಿ 60 ಮಂದಿ ಬಿಜೆಪಿಯವರು!
ನವದೆಹಲಿ; ಈ ವರ್ಷದಲ್ಲಿ ಬರೋಬ್ಬರಿ 68 ರಾಜ್ಯಸಭಾ ಸದಸ್ಯರ ಆರು ವರ್ಷದ ಅಧಿಕಾರಾವಾಧಿ ಮುಕ್ತಾಯವಾಗಲಿದೆ. ಇದರಲ್ಲಿ 9 ಮಂದಿ ಕೇಂದ್ರ ಸಚಿವರೂ ಸೇರಿದ್ದು, ಬಿಜೆಪಿ ಪಕ್ಷಕ್ಕೆ ಸೇರಿದ ಸದಸ್ಯರೇ 60 ಮಂದಿ ಇದ್ದಾರೆ. ಉಳಿದ ಎಂಟು ಮಂದಿ ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳಿಗೆ ಸೇರಿದವರಿದ್ದಾರೆ.
ರಾಜ್ಯವಾರು ನಿವೃತ್ತಿಯಾಗಲಿರುವ ರಾಜ್ಯಸಭಾ ಸದಸ್ಯರು
=====================================
ಉತ್ತರ ಪ್ರದೇಶ – 10 ರಾಜ್ಯಸಭಾ ಸದಸ್ಯರು
ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ – ತಲಾ 6 ಸದಸ್ಯರು
ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳ – ತಲಾ 5 ಸದಸ್ಯರು
ಕರ್ನಾಟಕ ಮತ್ತು ಗುಜರಾತ್ – ತಲಾ 4 ಸದಸ್ಯರು
ಒಡಿಶಾ, ಕೇರಳ, ತೆಲಂಗಾಣ, ಆಂಧ್ರಪ್ರದೇಶ – ತಲಾ 3 ಸದಸ್ಯರು
ಜಾರ್ಖಂಡ್ ಮತ್ತು ರಾಜಸ್ಥಾನ್ – ತಲಾ ಇಬ್ಬರು ಸದಸ್ಯರು
ಉತ್ತರಾಖಂಡ್, ಹಿಮಾಚಲಪ್ರದೇಶ, ಹರಿಯಾಣ, ಛತ್ತೀಸ್ಗಢ – ತಲಾ ಒಬ್ಬರು
ಇದರ ಜೊತೆ ನಾಮಿನೇಟೆಡ್ ಆಗಿರುವ ನಾಲ್ವರು ರಾಜ್ಯಸಭಾ ಸದಸ್ಯರ ಅವಧಿ ಕೂಡಾ ಈ ವರ್ಷದಲ್ಲೇ ಮುಕ್ತಾಯವಾಗಲಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಶಿಕ್ಷ ಸಚಿವ ಧರ್ಮೆಂದ್ರ ಪ್ರಧಾನ್, ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್, ಆರೋಗ್ಯ ಸಚಿವ ಮನ್ಷುಕ್ ಮಾಂಡವಿಯಾ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ರಾಜ್ಯಾಸಭೆ ಅವಧಿ ಏಪ್ರಿಲ್ನಲ್ಲಿ ಮುಕ್ತಾಯಗೊಳ್ಳಲಿದೆ.
ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇಲ್ಲಿಂದ ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲು ತುದಿಗಾಲಲ್ಲಿ ನಿಂತಿದೆ.