National

ನಾವು ಅಮೃತಕಾಲದ‌‌ ಮೊದಲ ವರ್ಷದಲ್ಲಿದ್ದೇವೆ; ಪ್ರಧಾನಿ ಮೋದಿ

ನವದೆಹಲಿ; ಪ್ರಧಾನಿ‌ ನರೇಂದ್ರ ಮೋದಿಯವರು ದೆಹಲಿಯ ಕೆಂಪು ಕೋಟೆಯ ಮೇಲೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಅನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ದೇಶದ ಜನತೆಗೆ ಶುಭಾಶಯ ತಿಳಿಸಿದರು.

ಮಹಾತ್ಮಾಗಾಂಧಿ, ಭಗತ್ ಸಿಂಗ್, ಸುಖದೇವ್ ಮುಂತಾದವರ ತ್ಯಾಗ, ತಪಸ್ಸು, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅವರನ್ನು ನಾವು ಇಂದು ಸ್ಮರಿಸಬೇಕಿದೆ ಎಂದು ಹೇಳಿದರು.

ಇನ್ನು ಇದೇ ವೇಳೆ ಪ್ರಧಾನಿ‌ ಮೋದಿಯವರು, ಮಣಿಪುರದ ವಿಚಾರವನ್ನು ಮಾತನಾಡಿದ್ದಾರೆ. ಮಣಿಪುರದಲ್ಲಿ ನಡೆದ ಹಿಂಸಾಚಾರಕ್ಕೆ ಅನೇಕರು ಬಲಿಯಾಗಿದ್ದಾರೆ. ಅಲ್ಲಿ ಶಾಂತಿ ನೆಲೆಸಬೇಕಿದೆ. ಅದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ದೇಶ ಮಣಿಪುರದ ಜನರ ಜೊತೆ ಇರುತ್ತದೆ ಎಂದು ಹೇಳಿದರು.

ದೇಶದ ಮುಂದೆ ಮತ್ತೊಂದು ಅವಕಾಶ ಬಂದಿದೆ. ಅಮೃತಕಾಲದಲ್ಲಿ ನಾವು ಇದ್ದೇವೆ. ಅಮೃತಕಾಲದ ಮೊದಲ ವರ್ಷದಲ್ಲಿದ್ದೇವೆ. ಈ ಸಮಯದಲ್ಲಿ ಸರ್ವಜನ ಹಿತಾಯ ಸರ್ವಜನ ಸುಖಾಯಗಾಗಿ ನಾವು ಮುಂದೆ ಬಂದರೇ ಮುಂದಿನ ಪೀಳಿಗೆಗೆ ಬಲಿಷ್ಠ ಭಾರತ ನಿರ್ಮಾಣ ಮಾಡಬಹುದು.

 

Share Post