National

ಮಹಾ ವಿಧಾನಸಭೆಯಲ್ಲಿ ನಾಡದ್ರೋಹಿ ಟೋಪಿ: ಶಾ ಸೂಚನೆಗೂ ಡೋಂಟ್ ಕೇರ್

ಮುಂಬೈ; ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಗೂ ಕ್ಯಾರೆ ಎನ್ನದ ಎನ್ ಸಿಪಿ ಶಾಸಕರು ಮಹಾರಾಷ್ಟ್ರ ವಿಧಾನಸಭೆ ಕಲಾಪಕ್ಕೆ ನಾಡದ್ರೋಹಿ ಘೋಷವಾಕ್ಯವಿತುವ ಟೋಪಿ ಧರಿಸಿ ಆಗಮಿಸಿದ್ದಾರೆ.

ಇತ್ತೀಚೆಗೆ ಅಮಿತ್ ಷಾ ಅವರು ಎರಡೂ ರಾಜ್ಯಗಳ ಸಿಎಂಗಳ ಸಭೆ ನಡೆಸಿ ಕೋರ್ಟ್ ತೀರ್ಪು ಬರುವವರೆಗೂ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದರು. ಆದ್ರೆ ಮಹಾರಾಷ್ಟ್ರ ಶಾಸಕರು ಸೊಪ್ಪು ಹಾಕಿಲ್ಲ.

ಎನ್ ಸಿಪಿ ಶಾಸಕರು, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಎಂಬ ಬರಹದ ಟೋಪಿ ಧರಿಸಿದ್ದಾರೆ.

ಒಬ್ಬನೇ ಒಬ್ಬ ಮರಾಠಿ ಭಾಷಿಕರನ್ನು ಮನೆಯಿಂದ ಹೊರ ಬರಲು ಬಿಟ್ಟಿಲ್ಲ. 865 ಗ್ರಾಮಗಳ ಜನ ಮಹಾರಾಷ್ಟ್ರ ಸೇರಲು ಬಯಸಿ ಠರಾವು ಹೊರಡಿಸಿದ್ದಾರೆ. ನಾನು ಬೆಳಗಾವಿಗೆ ಹೊರಟರೆ ಅಲ್ಲಿ ಮಿಲಿಟರಿ ತಂದು ನಿಲ್ಲಿಸಿದರು. ಗಡಿ ವಿವಾದ ಇತ್ಯರ್ಥ ಆಗುವವರೆಗೂ ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಆಗಬೇಕು ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿ ಶಾಸಕ ಹಸನ್ ಮುಶ್ರಿಫ್ ಉದ್ಧಟತನ ಹೇಳಿಕೆ ನೀಡಿದ್ದಾರೆ.

Share Post