National

ತಿಮ್ಮಪ್ಪನ ದರ್ಶನ – ಗಂಟೆಗೆ 4.60 ಲಕ್ಷ ಟಿಕೆಟ್‌ ಸೋಲ್ಡ್‌ ಔಟ್

ಹೈದರಾಬಾದ್‌ : ಕೋವಿಡ್‌ ನಂತರ ತಿಮ್ಮಪ್ಪನ ದರ್ಶನ ಸಿಗಬೇಕು ಅಂದರೆ ಆನ್‌ಲೈನ್‌ ಅಲ್ಲೇ ಟಿಕೆಟ್‌ ಕಾಯ್ದಿರಿಸಬೇಕು. ಈ ಸೇವೆ ಮತ್ತೆ ಶುರುವಾಗಿದೆ. ಒಂದು ಗಂಟೆಯಲ್ಲಿ 4 ಲಕ್ಷದ 60 ಸಾವಿರ ಟಿಕೆಟ್‌ ಸೇಲ್‌ ಆಗಿದೆ.

ಟಿಕೆಟ್ ಬಿಡುಗಡೆಯಾದ ಕೇವಲ 80 ನಿಮಿಷದಲ್ಲೇ ಮಾರಾಟವಾಗಿದೆ. ವಿಶೇಷ ದರ್ಶನಕ್ಕಾಗಿ ಒಂದು ಟಿಕೆಟ್‍ನ ಬೆಲೆ 300 ರೂಪಾಯಿ. ವೈಕುಂಠ ಏಕಾದಶಿಯ ಕಾರಣ ಈ ರೀತಿ ಬುಕ್ಕಿಂಗ್ ಆಗಿದೆ ಎಂದು ತಿಳಿದುಬಂದಿದೆ. ಸರ್ವದರ್ಶನಂ ಟಿಕೆಟ್‍ಗಳನ್ನು ಇದೇ ತಿಂಗಳ 31 ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಟಿಟಿಡಿ ತಿಳಿಸಿದೆ.

Share Post