ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ತಯಾರಿಸಿದ ವಿಗ್ರಹ ಪ್ರತಿಷ್ಠಪಾನೆ ಅಧಿಕೃತ
ಅಯೋಧ್ಯೆ; ಅಯೋಧ್ಯೆಯಲ್ಲಿ ಜನವರಿ 22 ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ಇದಕ್ಕೆ ಮೈಸೂರು ಮೂಲದ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ರಾಮಲಲ್ಲಾ ವಿಗ್ರಹ ಆಯ್ಕೆ ಮಾಡಲಾಗಿದೆ. ರಾಮಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ರಾಮಲಲ್ಲಾ ವಿಗ್ರಹವನ್ನು ಹೊಸ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಇದರ ಮುಹೂರ್ತವನ್ನು ವಾರಣಾಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ನಿರ್ಧರಿಸಿದ್ದಾರೆ ಎಂದು ಚಂಪತ್ ರಾಯ್ ಹೇಳಿದರು.
ಪ್ರತಿಷ್ಠಾಪನೆ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ಜ.16ರಿಂದ ಆರಂಭವಾಗಲಿವೆ. ಜ.21ರವರೆಗೆ ವಿಧಿವಿಧಾನಗಳು ನಡೆಯಲಿದ್ದು, ಜ.22ರಂದು ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ‘
ಆಯ್ಕೆಯಾಗಿರುವ ವಿಗ್ರಹ ಸುಮಾರು 150-200 ಕೆ.ಜಿ ಇದೆ. ಇದನ್ನು ಜನವರಿ 18 ರಂದು ದೇವಾಲಯದ ‘ಗರ್ಭ ಗೃಹ’ದಲ್ಲಿ ಅದರ ಸ್ಥಾನದಲ್ಲಿ ಇರಿಸಲಾಗುತ್ತದೆ.