ಪ್ರತಿಪಕ್ಷಗಳ ಗದ್ದಲ ಹಿನ್ನೆಲೆ: 1 ದಿನ ಮೊದಲೇ ಅಧಿವೇಶನ ಮುಕ್ತಾಯ
ನವದೆಹಲಿ: ಪ್ರತಿಪಕ್ಷಗಳು ನಿರಂತರವಾಗಿ ಗದ್ದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ಸಂಸತ್ ಚಳಿಗಾಲದ ಅಧಿವೇಶನವನ್ನು ಒಂದು ದಿನ ಮೊದಲೇ ಮುಕ್ತಾಯ ಮಾಡಲಾಗಿದೆ.
ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗಿಂತಲೂ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆ, ಗದ್ದಲ, ವಾಕ್ಸಮರವೇ ಅಧಿಕವಾಗಿತ್ತು. ಇವತ್ತೂ ಕೂಡ ಹೋರಾಟ, ಗದ್ದಲ ಮುಂದುವರಿದ ಕಾರಣ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡುವುದರೊಂದಿಗೆ ಅಧಿವೇಶನವನ್ನು ಮೊಟಕುಗೊಳಿಸಲಾಯಿತು.
ಚಳಿಗಾಲದ ಅಧಿವೇಶನ ಆರಂಭವಾದ ದಿನದಿಂದಲೂ ಪ್ರತಿಪಕ್ಷಗಳು ನಿರಂತರವಾಗಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಲೇ ಬಂದವು. ಹೀಗಾಗಿ ಕಲಾಪ ಸುಸೂತ್ರವಾಗಿ ನಡೆಯಲೇ ಇಲ್ಲ. ಹೀಗಾಗಿ ಎರಡೂ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.