Sports

ಮೊದಲ ಪಂದ್ಯವೇ ಯು ಮುಂಬಾಗೆ ರೋಚಕಗೆಲುವು

ಬೆಂಗಳೂರು: ಪ್ರೊ ಕಬಡ್ಡಿ ಹಬ್ಬಕ್ಕೆ ಇಂದು ಚಾಲನೆ ಸಿಕ್ಕಿದೆ. ಹೌದು, ವಿವೋ ಪ್ರೋ ಕಬಡ್ಡಿ ಲೀಗ್ ಎರಡು ವರ್ಷಗಳ ನಂತರ ಮತ್ತೆ ರಂಜಿಸಲು ಬಂದಿದೆ. ಪ್ರೋ ಕಬ್ಬಡಿ ಮೊದಲ ಪಂದ್ಯವೇ ಸಾಕಷ್ಟ ರೋಚಕತೆಯಿಂದ ಕೂಡಿತ್ತು. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ಅಂತ್ಯದಲ್ಲಿ ಎಡವಿದ್ದಾರೆ. ಯು ಮುಂಬಾಗೆ ಬಲಿಷ್ಠ ಪೈಪೋಟಿ ನೀಡಿದ್ದ ಬೆಂಗಳೂರು ಬುಲ್ಸ್​ ಕೊನೆಯ ಹಂತದಲ್ಲಿ ಸ್ಟ್ಯಾಟರ್ಜಿ ಸರಿಯಿಲ್ಲದೇ ಸೋತಿದೆ. ಪವನ್​ಕುಮಾರ್ ಆರಂಭದಲ್ಲಿ ಅಬ್ಬರಿಸಿದ್ದರೆ, ಸೆಕೆಂಡ್ ಹಾಫ್​ನಲ್ಲಿ ಅವರ ಆಟ ನಡೆಯಲಿಲ್ಲ. ಕೇವಲ ಪಂದ್ಯ ಮುಗಿಯಲು ಕೇವಲ 5 ನಿಮಿಷ ಇರುವಾಗ ಬೆಂಗಳೂರು ಬುಲ್ಸ್​ ತಂಡ ಯು ಮುಂಬಾಗೆ ಹೆಚ್ಚು ಪಾಯಿಂಟ್ಸ್​ ನೀಡಿತು. ಹೀಗಾಗಿ ಕೊನೆಯ ಹಂತದಲ್ಲಿ ಬೆಂಗಳೂರು ಬುಲ್ಸ್​ ತಂಡ ಎಡವಿತು. ಬೆಂಗಳೂರು ಬುಲ್ಸ್ 30 ಅಂಕ​ ಗಳಿಸಿದ್ರೆ, ಯು ಮುಂಬಾ 46 ಅಂಕಗಳಿಸಿ ಗೆದ್ದು ಬೀಗಿದೆ. ಓಪೆನಿಂಗ್​ ಪಂದ್ಯದಲ್ಲಿ ಎರಡು ತಂಡದ ಆಟಗಾರರ ರಣರೋಚಕ ಪ್ರದರ್ಶನ ನೀಡಿದ್ದರು. ಫಸ್ಟ್​ ಹಾಫ್​ ಅಂತ್ಯಕ್ಕೆ ಬೆಂಗಳೂರು ತಂಡ ಒಟ್ಟು 17 ಅಂಕ ಗಳಿಸಿತ್ತು. ಯು ಮುಂಬಾ 24 ಅಂಕ ಗಳಿಸಿ ಮುನ್ನಡೆ ಸಾಧಿಸಿತ್ತು. ಬೆಂಗಳೂರು ಬುಲ್ಸ್​ ಪರವಾಗಿ 6 ಬಾರಿ ರೈಡ್​ ಮಾಡಿ ಚಂದ್ರನ್​ ರಂಜಿತ್​ 9 ಅಂಕಗಳಿಸಿದರೆ, ಅತ್ತ ಯು ಮುಂಬಾ ತಂಡದ ಅಭಿಷೇಕ್​ ಸಿಂಗ್​ 11 ಬಾರಿ ರೈಡ್​ ಮಾಡಿ 14 ಅಂಕಗಳಿಸಿದರು. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿಕೊಂಡಿದ್ದಾರೆ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡಿಸಿದರು. ಸ್ಟಾರ್​ ಆಟಗಾರರಿದ್ದರೂ ಕೊನೆ ಹಂತದಲ್ಲಿ ಬೆಂಗಳೂರು ಬುಲ್ಸ್​ ಸೋಲು ಕಂಡಿದೆ.

 

Share Post