National

ಇಂಜೆಕ್ಷನ್‌ ಬೇಡಮ್ಮಾ…ಪುಟ್ಟ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ಅಜ್ಜಿ

ಆಂಧ್ರಪ್ರದೇಶ: ಇಂಜೆಕ್ಷನ್‌ ಅಂದ್ರೆ ಪುಟ್ಟಮಕ್ಕಳು ಹೇಗೆ ಭಯದಿಂದ ಹೆತ್ತವರನ್ನು ಅಪ್ಪಿಕೊಂಡು ಅಳ್ಳುತ್ತಾರೋ ಹಾಗೆ ಇಲ್ಲೊಬ್ಬ ಅಜ್ಜಿ ಕೊರೊನಾ ವ್ಯಾಕ್ಸಿನ್‌ ಹೆಕಿಸಿಕೊಲ್ಳಲು ಪುಟ್ಟ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆಂಧ್ರಪ್ರದೇಶದ ಕಮ್ಮಂ ಜಿಲ್ಲೆಯ ನಾಗಿಲಿಕೊಂಡ ಎಂಬ ಹಳ್ಳಿಯೊಂದರಲ್ಲಿ ಸೌಭಾಗ್ಯಮ್ಮ ಎಂಬ ಅಜ್ಜಿ ಕೋವಿಡ್‌ ಮೊದಲನೇ ಡೋಸ್‌ ತೆಗೆದುಕೊಂಡಿದ್ದಾರೆ. ಆದ್ರೆ ಎರಡನೇ ಡೋಸ್‌ ಹಾಕಿಸಿಕೊಳ್ಳದಿರುವ ಕಾರಣ ಸ್ಥಳೀಯ ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವ್ಯಾಕ್ಸಿನ್‌ ಹಾಕಿಸಿಕೊಳ್ಳುವಂತೆ ಕೇಳಿದ್ದಾರೆ. ಆದರೆ ಇಂಜೆಕ್ಷನ್‌ ಭಯದಿಂದ ಅಜ್ಜಿ ಯಾರು ಏನೇ ಹೇಳಿದ್ರು ನಾನು ವ್ಯಾಕ್ಸಿನ್‌ ತೆಗೆದುಕೊಳ್ಳುವುದಿಲ್ಲ ಎಂದು ಹಠ ಮಾಡಿ ಆರೋಗ್ಯಾಧಿಕಾರಿ ಕೈ ಹಿಡಿದು ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇಂಜೆಕ್ಷನ್‌ ನಿಮ್ಮ ಆರೋಗ್ಯ ಕಾಪಾಡುವುದಕ್ಕೆ ಎಂದು ಸ್ಥಳೀಯರೆಲ್ಲರೂ ಸೇರಿ ಅಜ್ಜಿಗೆ ಸಮಾದಾನ ಮಾಡಿದ್ದಾರೆ. ಅಜ್ಜಿಯ ಈ ಮುಗ್ದತೆಯ ಫೋಟೋ ಎಲ್ಲೆಡೆ ವೈರಲ್‌ ಆಗಿದೆ. ಅದಕ್ಕೆ ತಿಳಿದವರು ಹೇಳೋದು ಪುಟ್ಟ ಮಕ್ಕಳು ಹಾಗೂ ವೃದ್ದರ ಮನಸ್ಥಿತಿ ಒಂದೇ ಅಂತ..

Share Post