ತುಂಬಾ ಸಣ್ಣಗಿದ್ದೀರಾ? ಹಾಗಾದರೆ ಹೀಗೆ ಮಾಡಿ- ನೋಡಿ
ಸಾಮಾನ್ಯವಾಗಿ ದಪ್ಪ ಇದ್ದವರು ತೂಕ ಇಳಿಸುವುದಕ್ಕೆ ಪ್ರಯತ್ನಿಸುತ್ತಾರೆ. ಇನ್ನು ಕೆಲವರು ನಾವು ಸಣ್ಣ ಇದ್ದೀನಿ ಎಂದು ಚಿಂತಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಪ್ಪಗಿಂತ ಸಣ್ಣ ಇರೋದೆ ಬೆಟರ್ ಅನ್ಸುತ್ತೆ.
ಡೈರಿ ಉತ್ಪನ್ನಗಳನ್ನು ತಿಂದರೆ ತೂಕ ಏರಿಕೆಯಾಗುತ್ತಿದೆ ಎಂದು ಅನೇಕ ಜನರು ಹೇಳುತ್ತಾರೆ.. ಹೆಚ್ಚು ಕೊಬ್ಬಿನಂಶ ಇರುವ ಡೈರಿ ಉತ್ಪನ್ನಗಳ ಸೇವನೆ ಮಾಡುವುದರಿಂದ ಸ್ನಾಯುಗಳಲ್ಲಿ ಶಕ್ತಿ ಸಂಗ್ರಹ ಆಗುತ್ತದೆ. ಹೀಗಾಗಿ ಹೆಚ್ಚು ಹಾಲಿನ ಉತ್ಪನ್ನಗಳ ಸೇವನೆ ಮಾಡುವುದು ತೂಕ ಹೆಚ್ಚಿಸಿಕೊಳ್ಳುವವರಿಗೆ ನೆರವಾಗಲಿದೆ.
ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಆಹಾರ:
ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಕಡಿಮೆ ಇರುವ ಆಹಾರವನ್ನು ಸೇವನೆ ಮಾಡಿದರೆ ತೂಕ ಇಳಿಕೆ ಮಾಡಿಕೊಳ್ಳಬಹುದು. ಇದಕ್ಕೆ ತದ್ವಿರುದ್ಧ ಎನ್ನುವಂತೆ
ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಆಹಾರ ಹೆಚ್ಚಿರುವ ಆಹಾರವನ್ನು ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಶಕ್ತಿ ಹಾಗೂ ಕ್ಯಾಲರಿ ಅಧಿಕ ಪ್ರಮಾಣದಲ್ಲಿ ದೊರೆತು ತೂಕ ಹೆಚ್ಚಿಗೆ ಮಾಡಿಕೊಳ್ಳಬಹುದು. ಹೀಗಾಗಿ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಆಹಾರವಾದ ಅಕ್ಕಿ, ಧಾನ್ಯಗಳು, ಮೊಸರು, ಓಟ್ಸ್, ಗಿಣ್ಣು, ಆವಕಾಡೊ, ತೆಂಗಿನ ಎಣ್ಣೆ, ಮೊಟ್ಟೆ, ಕುಂಬಳಕಾಯಿ ಮತ್ತು ಸೂರ್ಯಕಾಂತಿ ಸೇವನೆ ಮಾಡುವುದು ಉತ್ತಮ. ಹಮ್ಮಸ್ ಜೊತೆ ಬಿಸ್ಕೇಟ್, ಆವಕಾಡೊ ಟೋಸ್ಟ್, ಪ್ರೋಟೀನ್ ಯುಕ್ತ ಪಾನೀಯಗಳು, ಬ್ರೆಡ್ ಜೊತೆ ಯಾವುದೇ ನಟ್ ಬಟರ್ ಅಂದರೆ ಕಡಲೆಕಾಯಿ, ಬಾದಾಮಿ, ಗೋಡಂಬಿ ಬಟರ್ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ
ಡೈರಿ ಉತ್ಪನ್ನಗಳು:
ಸಾಮಾನ್ಯವಾಗಿ ಡೈರಿ ಉತ್ಪನ್ನಗಳನ್ನು ತಿಂದರೆ ತೂಕ ಏರಿಕೆಯಾಗುತ್ತಿದೆ ಎಂದು ಅನೇಕ ಜನರು ಹೇಳುತ್ತಾರೆ.. ಹಾಗೆ ಹೆಚ್ಚು ಕೊಬ್ಬಿನಂಶ ಇರುವ ಡೈರಿ ಉತ್ಪನ್ನಗಳ ಸೇವನೆ ಮಾಡುವುದರಿಂದ ಸ್ನಾಯುಗಳಲ್ಲಿ ಶಕ್ತಿ ಸಂಗ್ರಹ ಆಗುತ್ತದೆ. ಹೀಗಾಗಿ ಹೆಚ್ಚು ಹಾಲಿನ ಉತ್ಪನ್ನಗಳ ಸೇವನೆ ಮಾಡುವುದು ತೂಕ ಹೆಚ್ಚಿಸಿಕೊಳ್ಳುವವರಿಗೆ ನೆರವಾಗಲಿದೆ.
ನಿಯಮಿತ ವ್ಯಾಯಾಮ:
ದೈಹಿಕ ಶಕ್ತಿ ಹೆಚ್ಚಾಗಲು ಪ್ರತಿಯೊಬ್ಬರು ಜಿಮ್, ವ್ಯಾಯಾಮಗಳ ಮೊರೆ ಹೋಗುವುದು ಸಹಜ. ಆದರೆ ನೀವು ಇದನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೀರಿ ಎಂಬುದು ಬಹಳ ಮುಖ್ಯ. ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿ ಕೊಬ್ಬುಗಳಾಗಿ ಪರಿವರ್ತನೆಯಾಗುವುದನ್ನು ಮೊದಲು ತಪ್ಪಿಸಿ. ಸ್ನಾಯುಗಳ ಬೆಳವಣಿಗೆಗೆ ವಾರಕ್ಕೆ ಕನಿಷ್ಠ 4 ರಿಂದ 5 ಬಾರಿ ಜಿಮ್‌ಗೆ ಹೋಗಿ.