ಪ್ರತಿ ಆರ್ಡರ್‌ನಲ್ಲೂ ಚಾಕೊಲೇಟ್ ಇಟ್ಟು ಹುಟ್ಟುಹಬ್ಬ ಆಚರಿಸಿದ ಡೆಲಿವರಿ ಬಾಯ್
ನವದೆಹಲಿ; ಆಹಾರ ಡೆಲಿವರಿ ಮಾಡುವ ಯುವಕನೊಬ್ಬ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ದೆಹಲಿಯಲ್ಲಿ ಝೊಮ್ಯಾಟೋನಲ್ಲಿ ಫುಡ್ ಡೆಲಿವರಿ ಮಾಡುವ ಕರಣ್ ಆಪ್ಟೆ ಎಂಬುವವರು ಇತ್ತೀಚೆಗೆ ತಮ್ಮ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ವಿಶೇಷವಾಗಿ ಆಚರಣೆ ಮಾಡಬೇಕೆಂದು ಯೋಚಿಸಿದ ಕರಣ್ ಆಪ್ಟೆ, ಹುಟ್ಟುಹಬ್ಬದಂದು ತಾನು ಫುಡ್ ಡೆಲಿವರಿ ಮಾಡುವ ಎಲ್ಲಾ ಮನೆಗೂ ಆರ್ಡ್ ಜೊತೆಗೆ ಒಂದು ಚಾಕಲೇಟ್ ಕೊಡಲು ನಿರ್ಧರಿಸಿದ್ದರು. ಅದರಂತೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಹೊಸ ಬಟ್ಟೆ ಖರೀದಿಸಿ ಅದನ್ನು ಧರಿಸಿಕೊಂಡು ಹುಟ್ಟುಹಬ್ಬದ ದಿನವೂ ಕೆಲಸಕ್ಕೆ ಹಾಜರಾದ ಕರಣ್ ಆಪ್ಟೆ, ಡೆಲಿವರಿ ಮಾಡುವ ಆಹಾರ ಬಾಕ್ಸ್‌ನ ಮೇಲೆ ಒಂದು ಚಾಕೋಲೇಟ್ ಅಂಟಿಸಿ ಎಲ್ಲರಿಗೂ ತಲುಪಿಸಿದ್ದಾರೆ. ಆ ಫೋಟೋವನ್ನು ಚಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಝೊಮ್ಯಾಟೋ ಕಂಪನಿ ಆ ಹುಡುಗನಿಗೆ ಒಳ್ಳೆಯ ಗಿಫ್ಟ್ ನೀಡಬೇಕೆಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.