LifestyleNational

ಐಫೋನ್‌ ಬೇಕೆಂದು ಮಗ ಹಠ; ಆಸೆ ಪೂರೈಸಿದ ಹೂ ಮಾರೋ ತಾಯಿ!

ಬೆಂಗಳೂರು; ಆತನ ತಾಯಿ ದೇವಸ್ಥಾನದ ಮುಂದೆ ಹೂವು ಮಾರುವವಳು.. ಹೇಗೋ ಕಷ್ಟಪಟ್ಟು ಜೀವನ ಸಾಗುತ್ತಿದೆ.. ಇದರ ನಡುವೆ ಆಕೆಯ ಮಗನಿಗೆ ಮನೆಯ ಪರಿಸ್ಥಿತಿ ಗೊತ್ತಿದ್ದೂ ಐಫೋನ್‌ ಖರೀದಿ ಮಾಡೋ ಹುಚ್ಚು.. ಐ ಫೋನ್‌ ಕೊಡಿಸು ಅಂತ ತಾಯಿಯ ಬೆನ್ನುಬಿದ್ದಿದ್ದ.. ಅಷ್ಟೊಂದು ಹಣ ನನ್ನ ಬಳಿ ಇಲ್ಲ ಅಂತ ತಾಯಿ ಹೇಳಿದ್ದಕ್ಕೆ ಮೂರು ದಿನ ಊಟ ನೀರು ಬಿಟ್ಟಿದ್ದ.. ಇದರಿಂದ ಕರಗಿದ ತಾಯಿ ಹೃದಯ ಅಲ್ಲಿ ಇಲ್ಲಿ ಹೊಂಚಿ ಮಗನಿಗೆ ಐ ಫೋನ್‌ ಕೊಡಿಸಿದ್ದಾಳೆ..

ಇದನ್ನೂ ಓದಿ; ರಾಖಿ ಹಬ್ಬಕ್ಕೆ ತವರಿಗೆ ಹೋಗ್ತೀನೆಂದ ಪತ್ನಿ; ಮೂಗು ಕತ್ತರಿಸಿದ ಪತಿ!

ಈ ಘಟನೆ ಎಲ್ಲಿ ನಡೆದಿದೆಯೋ ಗೊತ್ತಿಲ್ಲ.. ಆದ್ರೆ ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ಹೂವು ಮಾರುವ ತಾಯಿ ಕರುಳಿಗೆ ಸಂಕಟ ಕೊಟ್ಟು ಲಕ್ಷಾಂತರ ರೂಪಾಯಿ ಮೌಲ್ಯದ ಐ ಫೋನ್‌ ಕೊಡಿಸಿಕೊಂಡಿದ್ದಕ್ಕೆ ಮಗನ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.. ತಾಯಿ ಹೂವು ಮಾರಿದರೆ ಮಾತ್ರ ನಿಮ್ಮ ಜೀವನ ಆಗುತ್ತೆ.. ಅಂತಹದ್ದರಲ್ಲಿ ನೀನು ಲಕ್ಷಾಂತರ ರೂಪಾಯಿ ಮೌಲ್ಯದ ಫೋನ್‌ ಬೇಕು ಅಂತ ಹಠ ಹಿಡಿದು ಸಾಧಿಸಿದ್ದೀಯಾ.. ನೀನು ಎಂತಹ ಮಗ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ..

ಇದನ್ನೂ ಓದಿ; ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌!

ಇನ್ನು ವಿಡಿಯೋದಲ್ಲಿ ತಾಯಿ ಮುಗ್ದವಾಗಿ ಮಾತನಾಡಿದ್ದು, ಮಗ ಊಟ, ನೀರು ಬಿಟ್ಟಿದ್ದ.. ಅದಕ್ಕೇ ಮನಸು ಕರಗಿ ಐಫೋನ್‌ ಕೊಡಿಸಿದ್ದೇನೆ.. ದುಡಿದು ಹಣ ಸಂಪಾದನೆ ಮಾಡಿ ಐ ಫೋನ್‌ಗೆ ಕೊಟ್ಟಿರುವ ಹಣ ವಾಪಸ್‌ ಮಾಡು ಎಂದು ಹೇಳಿದ್ದೇನೆ ಎಂದು ತಾಯಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ; ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಕುತ್ತಿಗೆಗೆ ಇರಿದುಕೊಂಡ ಬಾಲಕಿ!

Share Post