ಆಗಾಗ ಜ್ವರ ಬರೋದು ಒಳ್ಳೆಯದಂತೆ..!; ಮಾರಕ ಕಾಯಿಲೆಗಳು ಬರದಂತೆ ತಡೆಯುತ್ತಂತೆ!
ಬೆಂಗಳೂರು; ಮಳೆಗಾಲ ಶುರುವಾಗಿದೆ.. ನೆಗಡಿ, ಕೆಮ್ಮು, ಜ್ವರದಂತಹ ಆರೋಗ್ಯ ಸಮಸ್ಯೆಗಳು ಬರೋದು ಕಾಮನ್.. ಜ್ವರ ಒಂದೆರಡು ದಿನಕ್ಕಿಂತ ಹೆಚ್ಚು ಕಾಡಿದರೆ ದೇಹ ನಿತ್ರಾಣವಾಗುತ್ತದೆ.. ಸುಸ್ತು ಹೆಚ್ಚಾಗುತ್ತದೆ ನಿಜ.. ಆದ್ರೆ ಆಗಾಗ ಹಾಗೆ ಜ್ವರ ಬರೋದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಂತೆ.. ಜ್ವರ ಬಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.. ಇದರಿಂದಾಗಿ ಭವಿಷ್ಯದಲ್ಲಿ ಬರುವ ಮಾರಕ ಕಾಯಿಲೆಗಳನ್ನು ಬರದಂತೆ ತಡೆಯುವುದಕ್ಕೆ ಸಾಧ್ಯ ಎಂದು ತಜ್ಞರು ಹೇಳುತ್ತಾರೆ..
ಇದನ್ನೂ ಓದಿ; ಕಿರಿಯ ವಿದ್ಯಾರ್ಥಿಗಳನ್ನು ಕೂಡಿಹಾಕಿ ದೊಣ್ಣೆಗಳಿಂದ ತೀವ್ರ ಹಲ್ಲೆ!
ಜ್ವರ ಬಂದಾಗ ನಮ್ಮ ದೇಹದ ಉಷ್ಣತೆ ಹೆಚ್ಚಾಗುತ್ತದೆ.. ಆಗ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ತೊಂದರೆ ಉಂಟಾಗುತ್ತದೆ.. ಇದರಿಂದಾಗಿ ನಮ್ಮ ದೇಹದಲ್ಲಿ ಬಿಳಿ ರಕ್ತದ ಕಣಗಳು ಕಾರ್ಯಪ್ರವೃತ್ತವಾಗುತ್ತವೆ.. ಬಿಳಿರಕ್ತಕಣ ಉತ್ಪಾದನೆ ಹೆಚ್ಚಾಗುತ್ತಿದ್ದಂತೆ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.. ಇದರಿಂದಾಗಿ ನಮ್ಮ ದೇಹಕ್ಕೆ ಯಾವುದೇ ಹಾನಿಕಾರಕ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಬರದಂತೆ ತಡೆಯಲು ಸಾಧ್ಯ ಎಂದು ರೋಗನಿರೋಧಕ ಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರದ ಅಧ್ಯಯನ ಹೇಳಿದೆ..
ವೈರಸ್‌ಗಳಂತಹ ಸೂಕ್ಷ್ಮಜೀವಿಗಳು ನಾವು ಸೇವಿಸುವ ಆಹಾರ ಮತ್ತು ಉಸಿರಾಡುವ ಗಾಳಿಯ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಅವರು ಸಕ್ರಿಯವಾಗಿರಲು 37 ° C ಒಳಗೆ ದೇಹದ ಉಷ್ಣಾಂಶವಿರಬೇಕು.. ಆದ್ರೆ ಜ್ವರ ಬಂದಾಗ ಅದು ಇನ್ನೂ ಹೆಚ್ಚಾಗುತ್ತದೆ.. ಆಗ ಇನ್ಫ್ಲುಯೆಂಜಾ ವೈರಸ್‌ನಂತಹ ಸೂಕ್ಷ್ಮಜೀವಿಗಳ ಸಂತತಿಯನ್ನೂ ಕೂಡಾ ನಾಶ ಮಾಡುತ್ತದೆ..
ಇದನ್ನೂ ಓದಿ; ವಿಧಾನಸಭೆಯಲ್ಲಿ ನೀಟ್ ಪರೀಕ್ಷೆ ರದ್ದು ನಿರ್ಣಯ ಅಂಗೀಕಾರ!
ದೇಹದ ಉಷ್ಣತೆಯ ಹೆಚ್ಚಳವು ಮಾರಕ ರೋಗ ತರುವ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ. ತಾಪಮಾನ ಹೆಚ್ಚಾದಾಗ ಸೈಟೊಕಿನ್ಸ್ ಪ್ರೊಟೀನ್ ಸಕ್ರಿಯಗೊಳ್ಳಲಿದ್ದು, ಇದು ಆಂಟಿ-ವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಣುಗಳನ್ನು ದೇಹಕ್ಕೆ ಬಿಡುಗಡೆ ಮಾಡುತ್ತದೆ. ಇದರಿಂದ ರೋಗದ ತೀವ್ರತೆ ಕಡಿಮೆಯಾಗುತ್ತದೆ ಎಂದು ರಾಸಾಯನಿಕ ತನಿಖಾ ಅಧ್ಯಯನ ಹೇಳಿದೆ.
ಜ್ವರದಿಂದ ದೇಹದ ಉಷ್ಣತೆಯು ಹೆಚ್ಚಾದಾಗ ಚಯಾಪಚಯ ದರವು ಹೆಚ್ಚಾಗುತ್ತದೆ. ಅಂದರೆ ಬೆವರುವುದು, ಮಲವಿಸರ್ಜನೆ ಮತ್ತು ಮೂತ್ರ ವಿಸರ್ಜನೆ ಕೂಡಾ ಹೆಚ್ಚಾಗುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ತ್ಯಾಜ್ಯವನ್ನು ಹೊರಹಾಕುತ್ತದೆ.