ವೇದಗಂಗಾ ನದಿಯಲ್ಲಿ ದುರಂತ; ನಾಲ್ವರು ವ್ಯಕ್ತಿಗಳು ನೀರು ಪಾಲು!
ಬೆಳಗಾವಿ; ಬಟ್ಟೆ ತೊಳೆಯಲು ಹೋಗಿದ್ದಾಗ ನಾಲ್ವರು ವ್ಯಕ್ತಿಗಳು ನದಿಯಲ್ಲಿ ಬಿದ್ದು ಸಾವಪ್ಪಿರುವ ದುರಂಗ ನಡೆದಿದೆ.. ಮಹಾರಾಷ್ಟ್ರದ ಕೊಲ್ಲಾಪುರದ ಕಾಗಲ್ ತಾಲ್ಲೂಜಿನ ಬಸ್ತವಾಡೆ ಅಣೆಕಟ್ಟೆಯಲ್ಲಿ ಈ ಘಟನೆ ನಡೆದಿದೆ.. ಇಲ್ಲಿ ವೇದಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಎಲ್ಲರೂ ಹೋಗಿದ್ದರು.. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದು, ರಕ್ಷಿಸಲು ಹೋದವರೂ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ..
ಜಿತೇಂದ್ರ ವಿಲಾಸ್ ಲೋಕ್ರೆ (36), ರೇಷ್ಮಾ ದಿಲೀಪ್ ಏಳಮಲ್ಲೆ (34), ಸವಿತಾ ಅಮರ್ ಕಾಂಬಳೆ (27) ಹಾಗೂ ಯಶ್ ದಿಲೀಪ್ ಏಳಮಲ್ಲೆ (17) ಎಂಬುವವರೇ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.. ಈ ನಾಲ್ವರು ಮೃತರಲ್ಲಿ ಇಬ್ಬರು ಬೆಳಗಾವಿಯ ಅಥಣಿ ತಾಲ್ಲೂಕಿನವರು ಎಂದು ಹೇಳಲಾಗುತ್ತಿದೆ..
ಮುಳುಗು ತಜ್ಷರು ಈಗಾಗಲೇ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.. ಮತ್ತೊಬ್ಬರ ದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.. ಎಲ್ಲರೂ ಕೂಡಾ ಆನೂರು ಗ್ರಾಮಕ್ಕೆ ತೀರ್ಥಯಾತ್ರೆಗೆಂದು ಬಂದಿದ್ದರು.. ಇಲ್ಲಿನ ಅತಿಥಿ ಗೃಹದಲ್ಲಿ ತಂಗಿದ್ದರು. ಬೆಳಗ್ಗೆ ಬಟ್ಟೆ ತೊಳೆಯಲು ನದಿಗೆ ಹೋಗಿದ್ದು, ಈ ವೇಳೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ..