ತಳ ಹಿಡಿದ ಪಾತ್ರೆಯ ಕಲೆ ಹೋಗಲು ಇಲ್ಲಿದೆ ಕೆಲ ಟಿಪ್ಸ್
ಅಡುಗೆ ಮನೆಯ ಕೆಲಸ ಅಡುಗೆ ಮನೆಯ ಕೆಲಸದ ಬಗ್ಗೆ ಎಷ್ಟೇ ಗಮನಹರಿಸಿದರೂ ಕೆಲವೊಮ್ಮೆ ಏನಾದ್ರು ಅನಾಹುತಗಳಾಗುತ್ತವೆ. ಒಲೆ ಮೇಲೆ ಪಾತ್ರೆ ಇಟ್ಟುಕೊಂಡು ಎಲ್ಲೋ ಗಮನಹರಿಸಿರುತ್ತೇವೆ. ಹಾಗೆ
ಪಾತ್ರೆ ಹಿಡಿಯುವುದುಂಟು. ಎಷ್ಟೇ ತಿಕ್ಕಿದರೂ ಈ ತಳ ಹಿಡಿದ ಕಲೆ ದೂರವಾಗುವುದಿಲ್ಲ ಎಂದು ಚಿಂತಿಸುತ್ತಿರತ್ತೇವೆ.ಹೀಗಾಗಿ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ ನೋಡಿ.
ತಳ ಹಿಡಿದ ಪಾತ್ರೆಯಲ್ಲಿ ಒಂದು ಲೀಟರ್ ನೀರು ಹಾಕಿ ಕುದಿಸಿ. ಇದು ತಳದಲ್ಲಿ ಗಟ್ಟಿಯಾಗಿ ಅಂಟಿಕೊಂಡ ಆಹಾರಗಳನ್ನು ಮೃದುಗೊಳಿಸುತ್ತದೆ. ಬಳಿಕ ಸ್ಕ್ರಬ್ ನಿಂದ ತಿಕ್ಕಿ ತೊಳೆಯಿರಿ.
ಉಪ್ಪು ಆಹಾರಕ್ಕೆ ರುಚಿ ಕೊಡುವುದು ಮಾತ್ರವಲ್ಲ, ಪಾತ್ರೆಗಳ ಕಲೆಯನ್ನು ದೂರಮಾಡುತ್ತದೆ. ತಳ ಹಿಡಿದ ಪಾತ್ರೆಗೆ ಅರ್ಧ ಹಿಡಿ ಉಪ್ಪು ಹಾಗೂ ನಿಂಬೆ ರಸ ಹಿಂಡಿ ಅರ್ಧ ಗಂಟೆ ಪಕ್ಕಕ್ಕಿಡಿ. ಸ್ವಲ್ಪ ಹೊತ್ತಿನ ಬಳಿಕ ತಿಕ್ಕಿದರೆ ಕಲೆ ದೂರವಾಗುತ್ತದೆ.
ಅಡುಗೆ ಸೋಡಾದಿಂದಲೂ ಕಲೆಗಳನ್ನು ದೂರ ಮಾಡಬಹುದು. ನೀರಿಗೆ ಸ್ವಲ್ಪ ಅಡುಗೆ ಸೋಡಾ ಮಿಕ್ಸ್ ಮಾಡಿ ತಿಳಿ ಹಿಡಿದ ಪಾತ್ರೆಗೆ ಹಾಕಿ ಹತ್ತು ನಿಮಿಷ ಕುದಿಸಿ. ಇದರಿಂದಲೂ ಕಲೆಗಳು ದೂರವಾಗುತ್ತವೆ.