Cinema

ಸಲ್ಲು ಹುಟ್ಟು ಹಬ್ಬಕ್ಕೆ ಕಿಚ್ಚನ ಸ್ಪೆಷಲ್‌ ವಿಶ್

ಬೆಂಗಳೂರು : ಸಲ್ಮಾನ್‌ ಅವರ ಹುಟ್ಟು ಹಬ್ಬಕ್ಕೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಕಿಚ್ಚ ಸುದೀಪ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್‌ ಖಾನ್‌ ಅವರಿಗೆ ವಿಶ್‌ ಮಾಡಿದ್ದಾರೆ. ವಿಶೇಷ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳುವ ಮೂಲಕ ಸಲ್ಲು ಅವರಿಗೆ ಶುಭಾಷಯ ತಿಳಿಸಿದ್ದಾರೆ.

56ನೇ ವಸಂತಕ್ಕೆ ಕಾಲಿಟ್ಟಿರುವ ನಟ ಸಲ್ಮಾನ್ ಖಾನ್‍ಗೆ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಸೋಶಿಯಲ್ ಮೀಡಿಯ ಮೂಲಕ ಶುಭಕೋರಿದ್ದಾರೆ.ಫೋಟೋ ಜೊತೆಗೆ ಆಲ್ ದಿ ಬೆಸ್ಟ್ ಸಲ್ಮಾನ್ ಖಾನ್. ನೀವು ಯಾವಾಗಲೂ ನಿಮ್ಮ ಕುಟುಂಬದವರಂತೆ ನನ್ನನ್ನು ನೋಡುತ್ತೀರಾ. ನಿಮ್ಮ ಅಪಾರವಾದ ಪ್ರೀತಿಗೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಖುಷಿ ಮತ್ತು ಆರೋಗ್ಯವನ್ನು ನೀಡಲಿ ಎಂದು ಶುಭಾಶಯ ತಿಳಿಸಿದ್ದಾರೆ.

ದಬಾಂಗ್‌ ಸಿನಿಮಾ ಸಮಯದಲ್ಲಿ ಇವರಿಬ್ಬರ ನಡುವಿನ ಉತ್ತಮ ಒಡನಾಟ ಸ್ನೇಹವಾಗಿದೆ. ದಬಾಂಗ್‌ ಸಿನಿಮಾ ಸಕ್ಸಸ್‌ ಆದಾಗ ಖುದ್ದು ಸಲ್ಮಾನ್‌ ಅವರೇ ಬೆಂಗಳೂರಿಗೆ ಬಂದು ಕಿಚ್ಚನಿಗೆ ಕಾರ್‌ ಗಿಫ್ಟ್‌ ಮಾಡುವ ಮೂಲಕ ಸರ್ಪ್ರೈಸ್‌ ನೀಡಿದ್ದರು.

Share Post