ಇಶಾ ಫೌಂಡೇಷನ್‌ಗೆ 5 ಸ್ಥಳಗಳಿಗೆ 550 ರೂಪಾಯಿಗೆ ಒಂದು ದಿನದ ಟ್ರಿಪ್!
ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರದ ಬಳಿ ಇಶಾ ಫೌಂಡೇಶನ್ ಅವರು ಆದಿಯೋಗಿ ಮೂರ್ತಿ ಸ್ಥಾಪನೆ ಬಳಿಕ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.. ವೀಕೆಂಡ್‌ಗಳಲ್ಲಂತೂ ಸಾವಿರ ಸಾವಿರ ಸಂಖ್ಯೆಯಲ್ಲಿ ಇಶಾ ಫೌಂಡೇಷನ್‌ಗೆ ಹೋಗುತ್ತಿದ್ದಾರೆ.. ಇದನ್ನು ಗುರುತಿಸಿದ ಬಿಎಂಟಿಸಿ ಒಂದು ದಿನದ ಪ್ಯಾಕೇಜ್ ಟ್ರಿಪ್ ಪರಿಚಯ ಮಾಡಿದೆ. ಬೆಂಗಳೂರಿನಿಂದ ಹೊರಟು ಇಶಾ ಫೌಂಡೇಶನ್ ಸೇರಿ ಚಿಕ್ಕಬಳ್ಳಾಪುರ ಸುತ್ತಮುತ್ತಲ ಐದು ಸ್ಥಳಗಳನ್ನು ತೋರಿಸಲಾಗುತ್ತದೆ.. ಇದಕ್ಕಾಗಿ 550 ರೂಪಾಯಿ ನಿಗದಿ ಮಾಡಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ…
ಇದನ್ನೂ ಓದಿ; ಶಾಲಾ ವಾಹನಗಳ ಕಲರ್ YELLOWನೇ ಯಾಕಿರುತ್ತೆ ಗೊತ್ತಾ..?
ಮೊದಲಿಗೆ ಎರಡು ಬಸ್‌ಗಳನ್ನು ಪ್ಯಾಕೇಜ್ ಅಡಿ ಬಿಡಲಾಗಿತ್ತು.. ಈಗ 30 ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ.. ಬಿಎಂಟಿಸಿಯ ಹಾವಾನಿಯಂತ್ರಿತ ಓಲ್ವೋ ಬಸ್ಗಳಲ್ಲಿ ಕರೆದುಕೊಂಡು ಹೋಗಲಾಗುತ್ತದೆ.. ಮಧ್ಯಾಹ್ನ 12 ಗಂಟೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹೊರಡುವ ಬಸ್ ರಾತ್ರಿ 9.30ಕ್ಕೆ ವಾಪಸ್ಸಾಗಲಿದೆ.. ನಂದಿ ಗ್ರಾಮದಲ್ಲಿರುವ ಭೋಗನಂದೀಶ್ವರ ದೇವಾಲಯ, ಕಣಿವೆ ಬಸವಣ್ಣ, ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ, ರಂಗಸ್ಥಳ ಹಾಗೂ ಇಶಾ ಫೌಂಡೇಶನ್ ತೋರಿಸಿಕೊಂಡು ಬರಲಾಗುತ್ತದೆ..
ಇದನ್ನೂ ಓದಿ; ಕೆಂಪು ಬದಲು ಮರೂನ್ ಲಿಪ್‌ಸ್ಟಿಕ್ ತಂದ ಗಂಡ; ಡಿವೋರ್ಸ್ ಕೇಳಿದ ಪತ್ನಿ!