LifestyleNational

ವಧುವಿನಂತೆ ಸಿಂಗರಿಸಿಕೊಂಡು ಪ್ರಿಯಕರನ ಮನೆಗೆ ಬಂದ 3 ಮಕ್ಕಳ ತಾಯಿ!

 

ಲಖನೌ; ಮೂವರು ಮಕ್ಕಳು ಹಾಗೂ ಗಂಡನನ್ನು ತೊರೆದ ಮಹಿಳೆ, ನವವಧುವಿನಂತೆ ಸಿಂಗಾರಗೊಂಡು ಪ್ರಿಯತಮನ ಮನೆಗೆ ಬಂದಿದ್ದಾಳೆ. ಉತ್ತರಪ್ರದೇಶದ ಸೋನ್ ಭದ್ರ ಎಂಬಲ್ಲಿ ಈ ಘಟನೆ ನಡೆದಿದೆ.

  ವಿಭಾ ಎಂಬಾಕೆಯೇ ಗಂಡ ಮಕ್ಕಳನ್ನು ತೊರೆದು ಪ್ರಿಯತಮನ ಮನೆಗೆ ಬಂದ ಮಹಿಳೆಯಾಗಿದ್ದಾಳೆ.. ಇದನ್ನು ನೋಡಿದ ಪ್ರಿಯತಮ ಸಂದೀಪ್ ಕುಟುಂಬದವರು ಶಾಕ್ ಆಗಿದ್ದಾರೆ..

  ಮದುವೆಗೂ ಮುಂಚೆ ವಿಭಾ, ಸಂದೀಪ್ ನನ್ನು ಪ್ರೀತಿ ಮಾಡುತ್ತಿದ್ದಳು.. ಆದ್ರೆ, ಮನೆಯವರು ಬೇರೆ ಹುಡುಗನನ್ನು ನೋಡಿ ಮದುವೆ ಮಾಡಿದ್ದರು. ಆದರೂ ಪ್ರಿಯತಮ ಸಂದೀಪ್ ಹಿಂದೆ ಬಿದ್ದಿದ್ದನಂತೆ.. ನಿನ್ನ ಪತಿ ಹಾಗೂ ಸಹೋದರನಿಗೆ ಖಾಸಗಿ ವಿಡಿಯೋಗಳನ್ನು ಕಳುಹಿಸೋದಾಗಿ ಬೆದರಿಸುತ್ತಿದ್ದಾನಂತೆ. ಇದರಿಂದ ಬೇಸತ್ತ ವಿಭಾ ಪ್ರಿಯಕರನ ಮನೆಗೆ ವಧುವಿನಂತೆ ಸಿಂಗರಿಸಿಕೊಂಡು ಬಂದು ಮದುವೆಯಾಗು ಎಂದು ಕೂತಿದ್ದಾಳೆ.. ಇದರಿಂದ ಪ್ರಿಯತಮ ಸಂದೀಪ್ ಕಂಗಲಾಗಿದ್ದಾನೆ..

 

Share Post