NationalPolitics

ಮನೆ ಖಾಲಿ ಮಾಡುತ್ತಿದ್ದೇನೆ-ಲೋಕಸಭಾ ಕಾರ್ಯದರ್ಶಿಗೆ ರಾಹುಲ್‌ ಗಾಂಧಿ ಪತ್ರ

ನವದೆಹಲಿ; ಎರಡು ವರ್ಷ ಶಿಕ್ಷೆಯಾಗಿರುವುದರಿಂದ ರಾಹುಲ್‌ಗಾಂಧಿ ಸಂಸತ್‌ ಸದಸ್ಯತ್ವ ಅನರ್ಹಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರ ಸರ್ಕಾರಿ ನಿವಾಸವನ್ನು ಖಾಲಿ ಮಾಡುತ್ತಿರುವುದಾಗಿ ರಾಹುಲ್‌ ಗಾಂಧಿ ಹೇಳಿದ್ದಾರೆ. ಲೋಕಸಭೆಯ ಕಾರ್ಯದರ್ಶಿ ಮೋಹಿತ್‌ ರಾಜನ್‌ ಅವರು ಮನೆ ಖಾಲಿ ಮಾಡುವಂತೆ ಸುತ್ತೋಲೆ ಹೊರಡಿಸಿದ್ದರು. ಇದಕ್ಕೆ ಉತ್ತರ ನೀಡಿರುವ ರಾಹುಲ್‌ ಗಾಂದಿ, ನಾವು ಮನೆ ಖಾಲಿ ಮಾಡುತ್ತಿದ್ದೇನೆ. ನಿಮ್ಮ ಪತ್ರಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ನಾನು ಈ ಮನೆಯಲ್ಲಿ ಸಂತೋಷದಿಂದ ಸಮಯ ಕಳೆದಿದ್ದೇನೆ. ಆ ಗಳಿಗೆಗಳ ನೆನಪು ನನ್ನಲ್ಲಿವೆ. ನನ್ನ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ನಾನು ಖಂಡಿತವಾಗಿಯೂ ನಿಮ್ಮ ಪತ್ರದಲ್ಲಿರುವ ವಿವರಗಳಿಗೆ ಬದ್ಧನಾಗಿರುತ್ತೇನೆ ಎಂದು ರಾಹುಲ್‌ ಗಾಂಧಿ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 2004ರಲ್ಲಿ ಲೋಕಸಭೆ ಸಂಸದರಾಗಿ ಆಯ್ಕೆಯಾದ ಬಳಿಕ ತುಘಲಕ್ ಲೇನ್‌ನಲ್ಲಿರುವ ಬಂಗಲೆಯನ್ನು ರಾಹುಲ್‌ ಗಾಂಧಿ ಅವರಿಗೆ ಮಂಜೂರು ಮಾಡಲಾಗಿತ್ತು.

Share Post