Lifestyle

ಬೈಕ್‌ನಲ್ಲಿ ಹೋಗುವಾಗ ನಾಯಿಗಳು ಕಚ್ಚಲು ಬಂದರೆ ಏನು ಮಾಡಬೇಕು..?

ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡುತ್ತಿದ್ದಾರೆ.. ಅದ್ರಲ್ಲೂ ಬೈಕ್‌ನಲ್ಲಿ ಹೋಗುವಾಗ ನಾಯಿಗಳು ಹಿಂಬಾಲಿಸಿ ಕಚ್ಚಲು ಬರುತ್ತವೆ.. ಇದರಿಂದಾಗಿ ಅಪಘಾತಗಳಾಗುವ ಸಂಭವ ಹೆಚ್ಚಿರುತ್ತದೆ.. ಹಾಗಾದ್ರೆ ನಾಯಿಗಳು ಬೈಕ್‌ಗಳನ್ನು ಯಾಕೆ ಹಿಂಬಾಲಿಸುತ್ತವೆ..? ನಾಯಿಗಳು ಬೈಕ್‌ ಹಿಂಬಾಲಿಸಿ ಬಂದಾಗ ಏನು ಮಾಡಬೇಕು..? ನೋಡೋಣ ಬನ್ನಿ..

ನಾಯಿ ನಿಮ್ಮ ಬಳಿಗೆ ಬಂದರೆ, ಭಯಪಡಬೇಡಿ. ಹಾಗೆಯೇ ಅದನ್ನು ನೋಡಿ ಓಡಿ ಹೋಗಬೇಡಿ. ಧೈರ್ಯವಾಗಿ ಅಲ್ಲಿಯೇ ನಿಲ್ಲಿ, ಆಗ ನಾಯಿ ಸುಮ್ಮನಾಗುತ್ತದೆ. ನಾವು ಭಯ ಪಟ್ಟರೆ ಮಾತ್ರ ಅದು ಕಚ್ಚಲು ಬರುತ್ತದೆ.. ಧೈರ್ಯವಾಗಿ ನಿಂತರೆ ಅದು ನಮ್ಮ ಕಡೆ ಬರುವುದಿಲ್ಲ..

ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು?
ನಾಯಿ ಕಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಉತ್ತಮ ತಂತ್ರವೆಂದರೆ ನಿಮ್ಮ ಕೈಯಲ್ಲಿ ವಸ್ತು ಅಥವಾ ಬಟ್ಟೆಯನ್ನು ನಾಯಿಯ ಕಣ್ಣುಗಳಿಗೆ ಎಸೆಯುವುದು. ಅಂದರೆ ನಿಮ್ಮ ಅಂಗಿ ಅಥವಾ ಸ್ಕಾರ್ಫ್, ದುಪಟ್ಟಾ ಇತ್ಯಾದಿಗಳನ್ನು ಅವುಗಳ ಮೇಲೆ ಎಸೆಯಬಹುದು. ಇದರಿಂದ ಅವರು ತಕ್ಷಣ ಅಲ್ಲಿಂದ ಪರಾರಿಯಾಗಬಹುದು. ನೀವು ಯಾರನ್ನಾದರೂ ಬೀದಿ ನಾಯಿಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದರೆ.. ನಿಮ್ಮ ಕೈಯಲ್ಲಿ ಏನಾದರೂ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಕೆಲವು ನಾಯಿಗಳು ನೀರು ಎರಚಿದರೆ ಓಡಿ ಹೋಗುತ್ತವೆ.

ನಾಯಿಗಳು ನಿಮ್ಮ ವಾಹನವನ್ನು ಹಿಂಬಾಲಿಸುತ್ತಿದ್ದರೆ..?
ಸಾಮಾನ್ಯವಾಗಿ ನೀವು ಬೈಕ್ ಓಡಿಸುವಾಗ ನಾಯಿಗಳು ಆಗಾಗ ನಿಮ್ಮ ವಾಹನವನ್ನು ಹಿಂಬಾಲಿಸುತ್ತದೆ. ಅಂತಹ ಸಮಯದಲ್ಲಿ ಭಯಪಡಬೇಡಿ. ವಾಹನವನ್ನು ವೇಗವಾಗಿ ಓಡಿಸಬೇಡಿ. ವೇಗವಾಗಿ ಹೋದರೆ.. ಅವಕ್ಕೂ ಅನುಮಾನ ಬಂದು, ಆಕ್ರಮಣ ಮಾಡಲು ಬರುತ್ತವೆ.. ವಾಹನ ನಿಧಾನ ಮಾಡಿದರೆ ಅವಯ ಸುಮ್ಮನಾಗುತ್ತವೆ.. ಮೇಲಾಗಿ ನಾವು ಧರಿಸುವ ಬಟ್ಟೆಯ ಬಣ್ಣಗಳು ಇಷ್ಟವಾಗದಿದ್ದರೂ, ವಿಚಿತ್ರವಾಗಿ ಕಂಡರೆ… ನಾಯಿಗಳು ಅಟ್ಟಿಸಿಕೊಂಡು ಬರುವ ಅಪಾಯವಿದೆ. ಅದಕ್ಕೇ ನಾವು ನಿಧಾನವಾಗಿ ಹೋದರೆ.. ಅವು ಕೂಡಾ ನಿಧಾನವಾಗಿ ಹೋಗುತ್ತಾರೆ..

Share Post