ಮುಟ್ಟಿದರೆ ಮುನಿ ಅಲ್ಲ…ಇದು ಮುಟ್ಟಿದ್ರೆ ಸಿಡಿದೇಳುವ ಸಸ್ಯ..! ಯುದ್ಧ ಮಾಡುವ ಸಸ್ಯದ ವಿಡಿಯೋ ವೈರಲ್
ಎಲ್ಲೆಡೆ ಈಗ ರಷ್ಯಾ-ಉಕ್ರೇನ್ ಕದನದ ಸುದ್ದಿಯದ್ದೇ ಕಾರುಬಾರು ಇದರ ನಡುವೆ ‘ಯುದ್ಧ ಮಾಡುವ ಸಸ್ಯʼ ಕೂಡ ಇದೆ. ಇದು ಕೂಡ ಶತ್ರುಗಳಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲುಉ ಬಾಂಬ್ ಮಿಸೈಲ್ಗಳಿಂದ ದಾಳಿ ಮಾಡುತ್ತದೆ. ಸಸ್ಯಗಳು ತುಂಬಾ ಸಾತ್ವಿಕ ಸ್ವಭಾವವನ್ನು ಹೊಂದಿರುತ್ತವೆ. ಬಣ್ಣಬಣ್ಣದ ಹೂವುಗಳು ಮತ್ತು ಹಣ್ಣುಗಳಿಂದ ಮನುಷ್ಯನಿಗೆ ಸಂತೋಷ ಹಾಗೂ ಅವಶ್ಯಕತೆಯನ್ನು ಪೂರೈಸುತ್ತವೆ. ಮುಟ್ಟಿದರೆ ಮುನಿ ಸಸ್ಯ ಶೇಮ್ಪ್ಲಾಂಟ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ತನ್ನನ್ನು ಮುಟ್ಟಿದರೆ ಶತ್ರುಗಳೊಂದಿಗೆ ಹೋರಾಡುವ ಸಸ್ಯದ ಬಗ್ಗೆ ನಿಮಗೆ ತಿಳಿದಿದೆಯೇ? ನೋಡೋಣ ಬನ್ನಿ.
ʻವುಡ್ ಸೋರೆಲ್ʼ ಎಂಬ ಸಸ್ಯವನ್ನು ಯಾರಾದರೂ ಮುಟ್ಟಿದರೆ ಅಷ್ಟೇ ಕತೆ. ತನ್ನನ್ನು ಯಾರಾದ್ರೂ ಮುಟ್ಟಿದ್ರು ಸಾಕು ಅವರ ಮೇಲೆ ಯುದ್ಧ ಮಾಡುತ್ತದೆ. ಹೋರಾಟದಲ್ಲಿ ಅದರಿಂದ ಹೊರಬರುವುದು ಕೇವಲ ಬಾಂಬುಗಳಲ್ಲ ಒಂದೇ ಸಲ ಕ್ಷಿಪಣಿಗಳನ್ನು ಹಾರಿಸುತ್ತದೆ. ಯಾರಾದರೂ ಆ ಗಿಡವನ್ನು ಮುಟ್ಟಿದರೆ ಸಾಕು ಸಸ್ಯವು ಅವರ ಹಿಡಿತದಿಂದ ರಕ್ಷಿಸಲು ಕ್ಷಿಪಣಿಗಳ ಪ್ರಯೋಗವನ್ನು ಮಾಡುತ್ತದೆ ..!
ಕ್ಷಿಪಣಿಗಳು ಎಂದರೆ ಆ ಸಸ್ಯದ ʻಬೀಜʼ(Sowing Seed) ಎಸೆಯುತ್ತದೆ. ʻವುಡ್ ಸೋರೆಲ್ʼ ಕಾಯಿಗಳು ನೋಡಲು ಅಕೇಶಿಯಾದಂತೆ ಇರುತ್ತವೆ. ಯಾರಾದರೂ ಅದನ್ನು ಮುಟ್ಟಿದರೆ ಸಾಕು ಒಮ್ಮೆಲೆ ಸಾಲು ಸಾಲಾಗಿ ಸಸ್ಯದ ಬೀಜಗಳನ್ನು ಹೊರ ಚೆಲ್ಲುತ್ತದೆ. ನಾಲ್ಕು ಮೀಟರ್ ದೂರದವರೆಗೂ ಸಸ್ಯದ ಬೀಜಗಳು ಹಾರುತ್ತವೆ. ಈ ಬೀಜಗಳಿಂದ ಮನುಷ್ಯರಿಗೆ ಯಾವುದೇ ರೀತಿಯ ನೋವಾಗುವುದಿಲ್ಲ ಆದರೆ ಸಣ್ಣ ಕೀಟಗಳಿಗೆ ತೊಂದರೆ ಉಂಟಾಗುತ್ತದೆ.
ಒಡಿಶಾದ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಈ ಯುದ್ಧ ಸಸ್ಯದ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಈ ತಳಿಯ ಸಸ್ಯವು ಬ್ರೆಜಿಲ್, ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಪ್ರಪಂಚದ ಅನೇಕ ಭಾಗಗಳಲ್ಲಿ ಈ ಸಸ್ಯ ಕಂಡುಬರುತ್ತದೆ. ಈ ಸಸ್ಯವು ಭಾರತದ ಕೆಲವು ಕಂಡುಬರುತ್ತದೆ.
Ballistic missiles as seen in the on going war are not humans prerogative only..
Wood Sorrel plant explodes & goes ‘ballistic’ when touched. Seeds are thrown as far as 4 metres away due to stored strain energy, with the plant targeting the object that agitated it.
?Arun Kumar pic.twitter.com/uRVWO2MOut— Susanta Nanda IFS (@susantananda3) February 26, 2022