LifestylePolitics

ಮಹಿಳೆ ಜೊತೆಗಿನ ಖಾಸಗಿ ಕ್ಷಣಗಳ ವಿಡಿಯೋ ಹಂಚಿಕೊಂಡ ಬಿಜೆಪಿ ನಾಯಕ!

ರಾಜಸ್ಥಾನ; ಬಿಜೆಪಿ ಮುಖಂಡರೊಬ್ಬರು ಮಹಿಳೆಯೊಂದಿನ ಖಾಸಗಿ ಕ್ಷಣಗಳ ವಿಡಿಯೋವನ್ನು ಕಣ್ತಪ್ಪಿನಿಂದ ವಾಟ್ಸ್‌ ಆಪ್‌ ಗ್ರೂಪ್‌ ಒಂದರಲ್ಲಿ ಹಂಚಿಕೊಂಡು ಮುಜುಗರಕ್ಕೀಡಾಗಿದ್ದಾರೆ.. ಈ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿ ಪಕ್ಷದಲ್ಲಿನ ಸ್ಥಾನದಿಂದ ಕೆಳಗಿಳಿಸಲಾಗಿದೆ.. ರಾಜಸ್ಥಾನ ಉದಯಪುರದಲ್ಲಿ ಈ ಘಟನೆ ನಡೆದಿದೆ.. ಉದಯಪುರ ಜಿಲ್ಲೆಯ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷನಾಗಿದ್ದ ನತ್ತೇಖಾನ್‌ ಪಠಾಣೆ ಎಂಬುವವರೇ ಈ ರೀತಿ ಮುಜುಗರಕ್ಕೀಡಾಗುವ ಕೆಲಸ ಮಾಡಿ ಸ್ಥಾನ ಕಳೆದುಕೊಂಡವರು..
ನತ್ತೇಖಾನ್‌ ಪಠಾಣ್‌ ಅವರು ಮಹಿಳೆಯೊಬ್ಬರ ಜೊತೆ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ.. ಅದರ ದೃಶ್ಯಗಳನ್ನು ಅವರು ಚಿತ್ರೀಕರಣ ಮಾಡಿಕೊಂಡಿದ್ದಾರೆ.. ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಿದ್ದ ಆ ಫೋಟೋ ಹಾಗೂ ವಿಡಿಯೋಗಳನ್ನು ಕಣ್ತಪ್ಪಿ ಅವರು ವಾಟ್ಸ್‌ ಆಪ್‌ ಗ್ರೂಪ್‌ ಒಂದಕ್ಕೆ ಷೇರ್‌ ಮಾಡಿದ್ದಾರೆ.. ನಂತರ ತಪ್ಪಿನ ಅರಿವಾಗಿ ಕೂಡಲೇ ಅವುಗಳನ್ನು ಗ್ರೂಪ್‌ನಿಂದ ಡಿಲೀಟ್‌ ಮಾಡಿದ್ದಾರೆ.. ಆದ್ರೆ ಅಷ್ಟರಲ್ಲಾಗಲೇ ಗ್ರೂಪ್‌ನಲ್ಲಿದ್ದ ಹಲವರು ಅವುಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಬೇರೆಯವರಿಗೆ ಹಂಚಿಕೆ ಮಾಡಿದ್ದರು.. ಇದರಿಂದ ಫೋಟೋಗಳು ಎಲ್ಲೆಡೆ ವೈರಲ್‌ ಆಗಿದ್ದವು.
ಸೋಮವಾರ ರಾತ್ರಿ ಈ ಘಟನೆ ನಡೆದಿತ್ತು.. ಇದರಿಂದ ಬಿಜೆಪಿ ಪಕ್ಷಕ್ಕೆ ಮುಜುಗರ ತಂದೊಡ್ಡಿತ್ತು.. ಆರು ವಿಡಿಯೋ ಹಾಗೂ ಹಲವು ಫೋಟೋಗಳು ಎಲ್ಲೆಡೆ ವೈರಲ್‌ ಆಗಿದ್ದವು.. ಒಂದು ವಿಡಿಯೋದಲ್ಲಿ ಮದ್ಯಪಾನ ಮಾಡಿದ್ದ ನತ್ತೇಖಾನ್‌ ಪಠಾಣ್‌ ಅವರು ಮಹಿಳೆಯೊಂದಿಗೆ ಅಸಭ್ಯ ರೀತಿಯಲ್ಲಿರುವ ದೃಶ್ಯ ಇದೆ.. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಆಕೆ ನನ್ನ ನಾಲ್ಕನೇ ಹೆಂಡತಿ, ಅದು ನನ್ನ ವೈಯಕ್ತಿಕ ವಿಷಯ ಎಂದು ಹೇಳಿಕೊಂಡಿದ್ದಾರೆ.. ಆದರೂ ಬಿಜೆಪಿ ಪಕ್ಷ ಅವರನ್ನು ಪಕ್ಷದ ಸ್ಥಾನದಿಂದ ಮುಕ್ತಗೊಳಿಸಿದೆ..

Share Post