International

RUSSIA-UKRAINE WAR; ರಷ್ಯಾ ವಿರುದ್ಧ ಹೋರಾಟಕ್ಕೆ ನ್ಯಾಟೋ ಸಿದ್ಧತೆ..?

ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ನ್ಯಾಟೋ ಪಡೆಗಳು ರಷ್ಯಾ ವಿರುದ್ಧ ಮುಗಿಬೀಳುವ ಲಕ್ಷಣ ಕಂಡುಬರುತ್ತಿವೆ. ನ್ಯಾಟೋ ಪಡೆಗಳಿಗೆ ಫ್ರಾನ್ಸ್‌ನಿಂದ ಶಸ್ತ್ರಾಸ್ತ್ರ ರವಾನೆ ಮಾಡಿದ್ದು, ರಷ್ಯಾ ಮೇಲೆ ನ್ಯಾಟೊ ಪಡೆಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಾಹಿತಿ ಪ್ರಕಾರ ನ್ಯಾಟೋ ಪಡೆಗಳು ಈಗಾಗಲೇ ರಷ್ಯಾದ ನೆರೆ ರಾಷ್ಟ್ರಗಳಲ್ಲಿ ಬೀಡುಬಿಟ್ಟಿವೆ. ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಾಗಿವೆ. ಯಾವುದೇ ಕ್ಷಣದಲ್ಲಾದರೂ ರಷ್ಯಾದ ಮೇಲೆ ಅವು ದಾಳಿ ನಡೆಸುವ ಸಾಧ್ಯತೆ ಇದೆ ಏಂದು ಹೇಳಲಾಗುತ್ತಿದೆ. ಇನ್ನು ರಷ್ಯಾ ಅಣುಬಾಂಬ್‌ ದಾಳಿಗೂ ನಾವು ಸಿದ್ಧ ಎಂದು ಹೇಳಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಿಕ್ಕಟ್ಟು ಮೂರನೇ ವಿಶ್ವಯುದ್ಧಕ್ಕೆ ದಾರಿ ಮಾಡಿಕೊಡಬಹುದಾ..? ಎಂಬ ಭೀತಿ ಶುರು ಮಾಡಿದೆ.

Share Post