ಆಟೋದಲ್ಲೇ ಪ್ರೇಮಿಗಳ ರೊಮ್ಯಾನ್ಸ್; ವಿಡಿಯೋ ಸಖತ್ ವೈರಲ್!
ನವದೆಹಲಿ; ಕಾಲ ಕೆಟ್ಟೋಗಿದೆ ಅಂತಾರಲ್ಲ.. ಇಂತಹ ದೃಶ್ಯಗಳನ್ನು ನೋಡಿಯೇ ಹಾಗೆ ಹೇಳೋದು.. ಈ ಪ್ರೇಮಿಗಳು ಸ್ಥಳ, ಸಮಯ ಏನನ್ನೂ ನೋಡದೇ ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ.. ಮೆಟ್ರೋ ರೈಲು, ಸಾರ್ವಜನಿಕ ಸ್ಥಳ ಎಲ್ಲೆಂದರಲ್ಲಿ ಮೈಮರೆತು ರೊಮ್ಯಾನ್ಸ್ ಮಾಡುತ್ತಾ ನೋಡುಗರಿಗೆ ಮುಜುಗರ ತರಿಸುತ್ತಿರುತ್ತಾರೆ.. ಅದೇ ರೀತಿಯ ಘಟನೆ ಇದು.. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರೇಮಿಗಳಿಬ್ಬರು ಅಲ್ಲಿಯೇ ಚುಂಬಿಸಿದ್ದಾರೆ. ರೊಮ್ಯಾನ್ಸ್ ಮಾಡಿದ್ದಾರೆ..
ಈ ಘಟನೆ ಎಲ್ಲಿ ನಡೆದಿಯೋ ಗೊತ್ತಿಲ್ಲ.. ಆದ್ರೆ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.. ಈ ಕುರಿತ ವಿಡಿಯೋವನ್ನು this_is_aj__ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.. ಇದನ್ನು ನೋಡಿದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ಬೇರೆಲ್ಲೂ ನಿಮಗೆ ಜಾಗ ಸಿಗಲಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ..