ದೇಶದ ಮೊದಲ ಸೋಲಾರ್ ರೂಫ್ ಸೈಕಲ್ ಟ್ರ್ಯಾಕ್; ಇದರಲ್ಲಿ 63 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ!
ನಗರ ಪ್ರದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು ಎಲ್ಲಾ ಸರ್ಕಾರಗಳೂ ಸೈಕಲ್ ಬಳಸುವಂತೆ ಜನರಲ್ಲಿ ಉತ್ತೇಜನ ನೀಡುತ್ತವೆ.. ಸೈಕಲ್ ಟ್ರ್ಯಾಕ್ ಮಾಡೋದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತವೆ.. ಆದ್ರೆ ಅದನ್ನು ಸರಿಯಾಗಿ ಕಾರ್ಯರೂಪಕ್ಕೆ ತರೋದಿಲ್ಲ.. ಆದ್ರೆ ಹೈದರಾಬಾದ್‌ನಲ್ಲಿ ಪರಿಸರ ಸ್ನೇಹಿ ಸೈಕಲ್ ಟ್ರ್ಯಾಕ್ ಕಾರ್ಯರೂಪಕ್ಕೆ ತಂದಿರುವುದಲ್ಲದೆ, ಅದರಿಂದ ವಿದ್ಯುತ್ ಉತ್ಪಾದನೆ ಕೂಡಾ ನಡೆಯುತ್ತಿದೆ.. ಸುಮಾರು 23 ಕಿಲೋ ಮೀಟರ್ ಉದ್ದದ ಸೈಕಲ್ ಟ್ರ್ಯಾಕ್‌ಗೆ ಸೋಲಾರ್ ರೂಫ್ ಅಳವಡಿಲಸಲಾಗಿದೆ.. ಇದರಿಂದಾಗಿ ಸುಮಾರು 63 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆಯಂತೆ.. ಈ ವಿದ್ಯುತ್ ನ್ನು ಸುತ್ತಮುತ್ತಲ ಬೀದಿ ದೀಪಗಳಿಗೆ ಬಳಸಲಾಗುತ್ತಿದೆ..
ಹೈದರಾಬಾದ್‌ನಲ್ಲಿ 23 ಕಿಮೀ ಉದ್ದ ಮತ್ತು 4.5 ಮೀಟರ್ ಅಗಲದ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ.. ಇದು ದ್ವಿಮುಖ ಟ್ರ್ಯಾಕ್ ಆಗಿದೆ.. ಇದು ಹೈದರಾಬಾದ್‌ನ ನಾನಕ್ರಮ್‌ಗುಡದಿಂದ ತೆಲಂಗಾಣ ರಾಜ್ಯ ಪೊಲೀಸ್ ಅಕಾಡೆಮಿ (ಟಿಎಸ್‌ಪಿಎ) ವರೆಗೆ 8.5 ಕಿಮೀ ಇದೆ.. ಇನ್ನು ಕೊಲ್ಲೂರಿನಿಂದ ನರ್ಸಿಂಗಿವರೆಗೆ 14.5 ಕಿಮೀ ಉದ್ದವಿದೆ.. ಕಳೆದ ವರ್ಷವೇ ಇದನ್ನು ಜನರ ಉಪಯೋಗಕ್ಕೆ ನೀಡಲಾಗಿದೆ.. ಇದಕ್ಕೆ ಮೇಲ್ಛಾವಣಿಯಲ್ಲಿ ಸೋಲಾರ್ ರೂಫ್ ನಿರ್ಮಾಣ ಮಾಡಲಾಗಿದೆ.. ಇದರಿಂದ ಸೈಕಲ್ ಸವಾರರು ಬಿಸಿಲಿನಿಂದ ರಕ್ಷಿಸಿಕೊಳ್ಳಬಹುದು.. ಜೊತೆಗೆ ವಿದ್ಯುತ್ ಉತ್ಪಾದನೆ ಕೂಡಾ ಮಾಡಬಹುದಾಗಿದೆ.. ಇದು ದೇಶದ ಮೊದಲ ಸೋಲಾರ್ ರೂಫ್ ಸೈಕಲ್ ಟ್ರ್ಯಾಕ್ ಎಂದು ಖ್ಯಾತಿ ಪಡೆದಿದೆ..
ಹೊರ ವರ್ತುಲ ರಸ್ತೆಯ ಉದ್ದಕ್ಕೂ ನಿರ್ಮಿಸಲಾದ ಹೈದರಾಬಾದ್‌ನಲ್ಲಿರುವ ಸೋಲಾರ್ ರೂಫ್ ಸೈಕಲ್ ಟ್ರ್ಯಾಕ್ ಅನ್ನು ‘ಹೆಲ್ತ್‌ವೇ’ ಎಂದು ಹೆಸರಿಸಲಾಗಿದೆ. ಇದನ್ನು ಭಾರತದಲ್ಲಿ ಒಂದು ಅನನ್ಯ ಮೇರುಕೃತಿ ಎಂದು ಹೆಸರಿಸಲಾಗಿದೆ. ದಕ್ಷಿಣ ಕೊರಿಯಾದ ಬೈಕ್ ಹೆದ್ದಾರಿಯ ನಂತರ ಇದು ವಿಶ್ವದ ಎರಡನೇಯದು ಎಂದು ತಿಳಿದುಬಂದಿದೆ..
ಸೈಕ್ಲಿಸ್ಟ್‌ಗಳ ಸುರಕ್ಷತೆ ಮತ್ತು ಅವರ ಒಟ್ಟಾರೆ ಅಗತ್ಯಗಳನ್ನು ಪರಿಗಣಿಸಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಹಲವಾರು ಸೌಕರ್ಯಗಳನ್ನು ಹೊಂದಿದೆ ಮತ್ತು ರಾತ್ರಿ ಸೈಕ್ಲಿಂಗ್ ಕೂಡಾ ಮಾಡಬಹುದು.. ಇದು 24/7 ತೆರೆದಿರುತ್ತದೆ..