InternationalLifestyle

ವರ ಇಲ್ಲದೆ ನಡೆಯಿತು ಮದುವೆ!; ಹನಿಮೂನ್‌ಗೆ ಹೋಗಿದ್ದು ಕೂಡಾ ಒಬ್ಬಳೇ!

ನವದೆಹಲಿ; ಇತ್ತೀಚೆಗೆ ವಿಚಿತ್ರ ಮದುವೆಗಳು ನಡೆಯುತ್ತಿವೆ.. ಗಂಡು, ಗಂಡನ್ನೇ ಮದುವೆಯಾಗೋದು, ಹೆಣ್ಣ-ಹೆಣ್ಣನ್ನೇ ಮದುವೆಯಾಗೋದು ನಡೆಯುತ್ತಿದೆ.. ಇನ್ನೂ ಕೆಲವು ಕಡೆ ಅವರನ್ನು ಅವರೇ ಮದುವೆಯಾಗೋ ಘಟನೆಗಳನ್ನು ಕೂಡಾ ನಾವು ನೋಡಿದ್ದೇವೆ.. ಅದೇ ರೀತಿಯ ಮದುವೆ ಇದು.. ಬ್ರಿಟನ್‌ನಲ್ಲಿ ಮದುವೆ ಒಂದು ಫಿಕ್ಸ್‌ ಆಗಿತ್ತು.. ಆದ್ರೆ ಮದುವೆಗೂ ಕೆಲ ಮುಂಚೆ ವಧುವಿಗೆ ವರನ ಬಗ್ಗೆ ಅನುಮಾನ ಬಂದಿದೆ.. ಆತನ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಅರಿತಿದ್ದಾಳೆ.. ಕೂಡಲೇ ಆತನೊಂದಿಗೆ ಮದುವೆ ಕ್ಯಾನ್ಸಲ್‌ ಮಾಡಿದ್ದಾಳೆ.. ಹಾಗಂತ ಮದುವೆ ನಿಂತಿಲ್ಲ.. ಮದುವೆಯೇನೋ ನಿಗದಿಯಾದ ಟೈಮ್‌ಗೆ ಆಗಿದೆ.. ಆದ್ರೆ ಅದೇ ಕುತೂಹಲದ ವಿಚಾರ..

ಇದನ್ನೂ ಓದಿ; ಹೆಣ್ಣುಮಕ್ಕಳ ಮದುವೆ ವಯಸ್ಸು 21 ವರ್ಷಕ್ಕೆ ಏರಿಕೆ!

ವರನೊಂದಿಗೆ ಮದುವೆ ಕ್ಯಾನ್ಸಲ್‌ ಮಾಡಿಕೊಂಡ ಯುವತಿ ಹನಿಮೂನ್‌ ಟ್ರಿಪ್‌, ಮದುವೆ ಸಮಾರಂಭವನ್ನು ಕ್ಯಾನ್ಸಲ್‌ ಮಾಡಿಲ್ಲ.. ಬದಲಾಗಿ 38 ಲಕ್ಷ ರೂಪಾಯಿ ಖರ್ಚು ಮಾಡಿ ನಾಟಿಂಗ್‌ಹ್ಯಾಮ್‌ ಶೈರ್‌ನ ಮ್ಯಾನ್ಸ್‌ ಫೀಲ್ಡ್‌ ನಲ್ಲಿ ಅದ್ದೂರಿ ಮದುವೆ ನಡೆದಿದೆ.. ಆದ್ರೆ ಇದು ವರನೇ ಇಲ್ಲದೆ ನಡೆದ ಮದುವೆ..!. ಅಚ್ಚರಿ ಅನಿಸಿದರೂ ಸತ್ಯ.. 31 ವರ್ಷದ ಲಿಂಡ್ನ ಸ್ಟೇಟರ್ ವ್ಯಕ್ತಿಯೊಬ್ಬನ ಜೊತೆ 12 ವರ್ಷಗಳಿಂದ ಡೇಟಿಂಗ್ ನಲ್ಲಿದ್ದಳು.. ಕೊನೆಗೆ ಇಬ್ಬರೂ ವಿವಾಹ ಮಾಡಿಕೊಳ್ಳಲು ನಿರ್ಧರಿಸಿ 2020ರಲ್ಲೇ ನಿಶ್ಚಿತಾರ್ಥ ಮಾಡಿಕೊಂಡರು.. ನಂತರ ಕೊರೋನಾ ಬಂದಿದ್ದರಿಂದ ಮದುವೆ ಮುಂದಕ್ಕೆ ಹೋಗಿತ್ತು.. ಕೊನೆಗೆ ಇದೇ ಆಗಸ್ಟ್‌ 17ಕ್ಕೆ ಮದುವೆ ಫಿಕ್ಸ್‌ ಆಗಿತ್ತು.. ಆದ್ರೆ ಮದುವೆ ದಿನಾಂಕ ಹತ್ತಿರವಾಗುತ್ತಿದ್ದಾಗ ವರ ತನಗೆ ಮೋಸ ಮಾಡುತ್ತಿದ್ದಾನೆಂದು ವಧುವಿಗೆ ಗೊತ್ತಾಗಿದೆ.. ಕೊನೆಗೆ ಆಕೆ ಆತನೊಂದಿಗೆ ಮದುವೆ ಕ್ಯಾನ್ಸಲ್‌ ಮಾಡಿದ್ದಾಳೆ.. ವರನಿಲ್ಲದೆ ಒಬ್ಬಳೇ ವಿವಾಹವಾಗಲು ನಿರ್ಧರಿಸಿದ್ದಾಳೆ.. ಅದರಂತೆ ಮದುವೆ ನಡೆದಿದೆ..

ಇದನ್ನೂ ಓದಿ; ಪೊದೆಯಲ್ಲಿ ಸಿಕ್ಕ ಸೂಟ್‌ಕೇಸ್‌ನಲೇನಿತ್ತು..?; ಆ ಮಹಿಳೆ ಮಾಡಿದ್ದಾದ್ರೂ ಏನು..?

Share Post