LifestyleNational

ಪತಿಯನ್ನು ತೊರೆದು ಸೊಸೆ ಜೊತೆ ಸಲಿಂಗ ವಿವಾಹವಾದ ಅತ್ತೆ!

ಪಾಟ್ನಾ(Bihar); ಅತ್ತೆಯೊಬ್ಬಳು ತನ್ನ ಪತಿಯನ್ನು ದೂರ ಮಾಡಿಕೊಂಡು ಸೊಸೆಯನ್ನು ಪ್ರೀತಿಸಿ ಸಲಿಂಗ ವಿವಾಹವಾಗಿದ್ದಾರೆ.. ಬಿಹಾರದ ಗೋಪಾಲ್‌ ಗಂಜ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.. ಎಲ್ಲರ ಒಪ್ಪಿಗೆಯ ಮೇರೆಗೆ ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ಈ ವಿವಾಹ ನಡೆದಿದೆ.. ಇವರಿಬ್ಬರೂ ಮೂರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಸರಣಿ ಅಪಘಾತ ಮಾಡಿದ ವೊಲ್ವೋ ಬಸ್‌ ಚಾಲಕ!

ಸುಮನಾ ಹಾಗು ಶೋಭಾ ವಿವಾಹವಾದವರು.. ಇಬ್ಬರೂ ಕೂಡಾ ಈಗಾಗಲೇ ವಿವಾಹವಾಗಿ ಗಂಡಂದಿರು ಇದ್ದಾರೆ.. ಆದ್ರೆ ಅವರನ್ನು ತೊರೆದು ಇವರಿಬ್ಬರೂ ಮದುವೆಯಾಗಿದ್ದಾರೆ.. ದೇವಸ್ಥಾನದಲ್ಲಿ ಇಬ್ಬರ ಮದುವೆ ನಡೆದಿದ್ದು, ಸುಮನ್-ಶೋಭಾ ಹಾರ ಬದಲಾಯಿಸಿಕೊಂಡಿದ್ದಾರೆ. ಸುಮನ್‌ ಅವರು ಶೋಭಾಗೆ ಹಿಂದೂ ಸಂಪ್ರದಾಯದಂತೆ ಮಂಗಳಸೂತ್ರ ಕಟ್ಟಿದ್ದಾರೆ..
ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; 3 ವರ್ಷದಲ್ಲಿ 5 ಮದುವೆಯಾದ ಹುಬ್ಬಳ್ಳಿಯ ಹೆಣ್ಣು!

Share Post