CrimeDistricts

ಹೆಂಡತಿ ಮೇಲಿನ ಕೋಪ; ಇಬ್ಬರು ಮಕ್ಕಳ ಕತ್ತು ಸೀಳಿದ ಪಾಪಿ ತಂದೆ

ಮಂಡ್ಯ; ಹೆಂಡತಿ ಜೊತೆ ಜಗಳವಾಡಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳ ಕುತ್ತಿಗೆ ಸೀಳಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಬಳಿಯ ಮರಳಗಾಲದಲ್ಲಿ ನಡೆದಿದೆ. ಇದೇ ವೇಳೆ ಅಡ್ಡ ಬಂದ ಪತ್ನಿ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಶ್ರೀಕಾಂತ್‌ ಎಂಬಾತನೇ ಈ ಕೃತ್ಯ ಎಸಗಿದ ಪಾಪಿ. ತಂದೆಯ ಕೈಯಲ್ಲೇ ಆದರ್ಶ (4) ಹಾಗೂ ಅಮೂಲ್ಯ (2) ಎಂಬ ಇಬ್ಬರು ಮಕ್ಕಳು ಸಾವನ್ನಪ್ಪಿವೆ. ಪತ್ನಿ ಲಕ್ಷ್ಮಿ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಶ್ರೀಕಾಂತ್‌ ಗುಲ್ಬರ್ಗ ಜಿಲ್ಲೆ ಗಾಣಗಪುರ ಗ್ರಾಮಕ್ಕೆ ಸೇರಿದವನು ಎಂದು ತಿಳಿದುಬಂದಿದೆ. ಆರು ವರ್ಷದ ಹಿಂದೆ ಶ್ರೀಕಾಂತ್‌, ಲಕ್ಷ್ಮಿ ಅವರನ್ನು ವಿವಾಹವಾಗಿದ್ದ. ಮದುವೆಯಾದ ದಿನದಿಂದಲೂ ಒಂದಿಲ್ಲೊಂದು ಕ್ಯಾತೆ ತೆಗೆದು ಗಲಾಟೆ ಮಾಡುತ್ತಿದ್ದ.

Share Post