ತನ್ನ ಮಗಳಿಗಿಂತ ಚೆನ್ನಾಗಿ ಓದುತ್ತಿದ್ದಕ್ಕೆ ಶಿಕ್ಷಕಿ ಟಾರ್ಚರ್; ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ!
ಹಾವೇರಿ; ತನ್ನ ಮಗಳಿಗಿಂತ ಚೆನ್ನಾಗಿ ಓದುತ್ತಿದ್ದರಿಂದ ಹೊಟ್ಟೆಕಿಚ್ಚುಪಟ್ಟುಕೊಂಡ ಶಿಕ್ಷಕಿ ವಿದ್ಯಾರ್ಥಿನಿಗೆ ದಿನವೂ ಟಾರ್ಚರ್ ನೀಡಲು ಶುರು ಮಾಡಿದ್ದಾರೆ.. ಇತ್ತ ಕಷ್ಟಪಟ್ಟು ಓದಿ ಶಾಲೆಯಲ್ಲಿ ಎಲ್ಲಾ ವಿಷಯಗಳಲ್ಲೂ ಟಾಪ್ ಬರುತ್ತಿದ್ದ ವಿದ್ಯಾರ್ಥಿನಿ ಶಿಕ್ಷಕಿ ಟಾರ್ಚರ್‌ಗೆ ಮನನೊಂದಿದ್ದಾಳೆ.. ಕೊನೆಗೆ ತಡೆಯೋಕೆ ಆಗದೇ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಇಂತಹ ಹೃದಯ ಕಲಕಯವ ಘಟನೆ ನಡೆದಿರೋದು ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಆಲದಕಟ್ಟೆ ಗ್ರಾಮದಲ್ಲಿ..
15 ವರ್ಷ ವಯಸ್ಸಿನ 9 ನೇ ತರಗತಿ ವಿದ್ಯಾರ್ಥಿನಿ ಅರ್ಚನಾ ಆತ್ಮಹತ್ಯೆ ಮಾಡಿಕೊಂಡವಳು.. ಈಕೆ ನೂರೆಂಟು ಕನಸುಗಳೊಂದಿಗೆ ತುಂಬಾ ಕಷ್ಟಪಟ್ಟು ಓದುತ್ತಿದ್ದಳು.. ಹಿರೇಕೆರೂರಿನ ದೂದಿಹಳ್ಲಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅರ್ಚನಾ ವ್ಯಾಸಂಗ ಮಾಡುತ್ತಿದ್ದಳು.. ಈಕೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಸಾವಿಗೆ ಶಿಕ್ಷಕರಾದ ಆರಿತವುಲ್ಲಾ ಕುಟುಂಬವೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ..
ಶಿಕ್ಷಕಿ ಆರಿತವಿಲ್ಲಾ ಮಗಳು ಝೋಯಾ ಕೂಡಾ ಅರ್ಚನಾ ಕ್ಲಾಸ್‌ಮೇಟ್ ಆಗಿದ್ದಳು.. ಅರ್ಚನಾ ಝೋಯಾಗಿಂತ ಚೆನ್ನಾಗಿ ಓದುತ್ತಿದ್ದಳು.. ಕ್ಲಾಸ್‌ಗೆ ಟಾಪ್ ಬರುತ್ತಿದ್ದಳು.. ಆಟದಲ್ಲೂ ಅರ್ಚನಾಳೇ ಮುಂದು.. ಇದನ್ನು ಸಹಿಸದ ಝೋಯಾ ತನ್ನ ತಾಯಿಗೆ ಅರ್ಚನಾ ವಿರುದ್ಧ ದೂರುಗಳನ್ನು ಹೇಳಿದ್ದಾಳೆ.. ಹೀಗಾಗಿ ಶಿಕ್ಷಕಿ ಆರಿತವುಲ್ಲಾ ಅವರು ಅರ್ಚನಾಳನ್ನು ತನ್ನ ಮನೆಗೆ ಕರೆಸಿಕೊಂಡು ರಾತ್ರಿಯಿಡೀ ಟಾರ್ಚರ್ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.. ತಂದೆ ಕುಡುಕನಾಗಿದ್ದರೂ ಕಷ್ಟಪಟ್ಟು ಅರ್ಚನಾ ಓದುತ್ತಿದ್ದಳು.. ಇತ್ತ ಶಿಕ್ಷಕಿ ಟಾರ್ಚರ್ ಕೊಟ್ಟಾಗ ತನ್ನ ಕನಸುಗಳು ಕಮರಿಹೋಗಿದ್ದವು.. ಕೊನೆಗೆ ಆಕೆ ಸೂಸೈಡ್ ಮಾಡಿಕೊಂಡಿದ್ದಾಳೆ..
ಇನ್ನೊಂದೆಡೆ ಅರ್ಚನಾ ಪೋಷಕರು ಕೂಡಾ ಶಿಕ್ಷಕಿಯ ಕುಟುಂಬದ ಜೊತೆ ದುಡ್ಡಿನ ವ್ಯವಹಾರ ನಡೆಸಿ, ಯಾವುದೇ ಕಂಪ್ಲೇಂಟ್ ಕೊಡದೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂದು ಆರೋಪಿಸಲಾಗಿದೆ..