CinemaNational

500 ರೂಪಾಯಿ ಕದ್ದಿದ್ದಾನೆಂದು ಸ್ವಂತ ಮಗನನ್ನೇ ಕೊಂದ ತಂದೆ!

ನವದೆಹಲಿ; ಮನೆಯಿಂದ 500 ರೂಪಾಯಿ ಕದ್ದಿದ್ದಾನೆ ಎಂಬ ಅನುಮಾನದಿಂದ ತಂದೆಯೇ 10 ವರ್ಷದ ಮಗನನ್ನು ಕೊಲೆ ಮಾಡಿದ್ದಾನೆ. ಗಾಜಿಯಾಬಾದ್ ನ ತ್ಯೋಡಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ..

  10 ವರ್ಷದ ಬಾಲಕ ಆದ್ ಎಂಬಾತಾನೆ ಕೊಲೆಯಾದ ಬಾಲಕನಾಗಿದ್ದಾನೆ.. ಬಾಲಕ ಆದ್ ತಂದೆ ನೌಶಾದ್ ಹಾಗೂ ಮಲತಾಯಿ ರಜಿಯಾ ಜೊತೆ ವಾಸವಿದ್ದ.. ಇಬ್ಬರೂ ವಿನಾಕಾರಣ ಆತನಿಗೆ ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ..

  ನಿನ್ನೆ ಬೆಳಗ್ಗೆ 500 ರೂಪಾಯಿ ಮನೆಯಲ್ಲಿ ಕಾಣಿಸುತ್ತಿರಲಿಲ್ಲ.. ಹೀಗಾಗಿ ನೌಶಾದ್ ತನ್ನ ಮಗ ಆದ್ ಕದ್ದಿದ್ದಾನೆ ಎಂದು ಆರೋಪ ಮಾಡಿದ್ದಾನೆ.. ಆತನ ಮೇಲೆ ತೀವ್ರ ಹಲ್ಲೆ ಮಾಡಿದ್ದಾನೆ.. ಲೋಹದ ಪೈಪ್ ಕಾಯಿಸಿ ಅದರಿಂದ ಬರೆ ಹಾಕಿದ್ದಾನೆ. ಇದರಿಂದ ಆದ್ ಸಾವನ್ನಪ್ಪಿದ್ದಾನೆ.

 

Share Post