Andhrapradesh; ಮುಸಲ್ಮಾನರು ಆರಾಧಿಸುವ ವೆಂಕಟೇಶ್ವರ; ಯುಗಾದಿಯಂದು ವಿಶೇಷ ವ್ರತಾಚರಣೆ!
ಕಡಪ; ಜಾತಿ, ಮತ ಕಲಹಗಳು ಹೆಚ್ಚಾಗುತ್ತಲೇ ಇವೆ.. ಶಿಕ್ಷಣ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಜಾತಿ, ಧರ್ಮಗಳೇ ಕೆಲಸ ಮಾಡುತ್ತವೆ.. ಇದರ ನಡುವೆ ಇಲ್ಲೊಂದು ದೇವಸ್ಥಾನ ಇದೆ.. ಇದು ಧರ್ಮ ಸಾರಮಸ್ಯದ ಪಾಠ ಹೇಳಿಕೊಡುತ್ತಿದೆ.. ಇದರ ಹೆಸರು ಕಡಪ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇಗುಲ.. ಆಂಧ್ರಪ್ರದೇಶದ ಕಡಪದಲ್ಲಿರುವ ಈ ವೆಂಕಟೇಶ್ವರನಿಗೆ ಮುಸಲ್ಮಾನರು ಪೂಜೆ ಸಲ್ಲಿಸುತ್ತಾರೆ. ಯುಗಾದಿ ಸಂದರ್ಭದಲ್ಲಿ ವಿಶೇಷ ವ್ರತಾಚರಣೆ ಮಾಡಿ, ಹಬ್ಬದ ದಿನ ವೆಂಕಟೇಶ್ವರನ ದರ್ಶನ ಮಾಡಿಕೊಳ್ಳುತ್ತಾರೆ.
ವೆಂಕಟೇಶ್ವರ ತಮ್ಮ ಮನೆ ಅಳಿಯ ಎಂಬ ನಂಬಿಕೆ;
ವೆಂಕಟೇಶ್ವರ ತಮ್ಮ ಮನೆ ಅಳಿಯ ಎಂಬ ನಂಬಿಕೆ; ತಿರುಪತಿಯಿಂದ 120 ಕಿಲೋ ಮೀಟರ್ ದೂರದಲ್ಲಿರುವ ಕಡಪ ನಗರದಲ್ಲಿ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದಾರೆ.. ಈ ಭಾಗದ ಮುಸ್ಲಿಮರು, ವೆಂಕಟೇಶ್ವರನನ್ನು ತಮ್ಮ ಮನೆಯ ಅಳಿಯ ಎಂದೇ ಗೌರವಿಸುತ್ತಾರೆ.. ಯಾಕಂದ್ರೆ ಇದರ ಹಿಂದೆ ಒಂದು ಕತೆಯೇ ಇದೆ. ವೆಂಕಟೇಶ್ವರ ಸ್ವಾಮಿ, ಮುಸ್ಲಿಂ ಮಹಿಳೆಯನ್ನು ಮದುವೆಯಾದರು ಎಂಬ ಪ್ರತೀತಿ ಈ ಭಾಗದಲ್ಲಿದೆ… ಈ ಭಾಗದ ಮುಸ್ಲಿಮರು ಹಾಗೂ ಹಿಂದೂಗಳು ಇದನ್ನು ನಂಬುತ್ತಾರೆ… ಹೀಗಾಗಿ, ಯುಗಾದಿ ದಿನವನ್ನು ಕಡಪದ ಮುಸ್ಲಿಮರು ವಿಶೇಷವಾಗಿ ಆಚರಿಸುತ್ತಾರೆ.. ಮುಸ್ಲಿಮರ ಪ್ರತಿ ಮನೆಯವರು ಕೂಡಾ ಈ ದೇಗುಲಕ್ಕೆ ಬಂದು ದರ್ಶನ ಪಡೆಯುತ್ತಾರೆ.
ಮಲ್ಲಿಕ್ ಕಪೂರ್ ಮಗಳನ್ನು ಮದುವೆಯಾಗಿದ್ದಂತೆ ವೆಂಕಟೇಶ್ವರ..!
ಮಲ್ಲಿಕ್ ಕಪೂರ್ ಮಗಳನ್ನು ಮದುವೆಯಾಗಿದ್ದಂತೆ ವೆಂಕಟೇಶ್ವರ..!; ವೆಂಕಟೇಶ್ವರ ಸ್ವಾಮಿಯ ಪತ್ನಿ ಗೋದಾದೇವಿಯನ್ನು ಮುಸ್ಲಿಮರು ಬೀಬಿ ನಾಂಚಾರಮ್ಮ ಎಂದು ನಂಬಿದ್ದಾರೆ. ವೆಂಕಟೇಶ್ವರ ದೇವರು ಕ್ರಿ.ಶ.1311ರಲ್ಲಿ ಮಲಿಕ್ ಕಪೂರ್ ಎಂಬ ಸೇನಾಧಿಪತಿ ಮಗಳು ಬೀಬಿ ನಾಂಚಾರಮ್ಮನನ್ನು ಮದುವೆಯಾದರೆಂದು ಇಲ್ಲಿನ ಜನ ನಂಬುತ್ತಾರೆ. ಹೀಗಾಗಿ ಮುಸ್ಲಿಮರು ಯುಗಾದಿ ಹಬ್ಬಕ್ಕೂ ಎರಡು ವಾರ ಮುನ್ನ ಮಾಂಸಾಹಾರ ಸೇವಿಸುವುದನ್ನು ನಿಲ್ಲಿಸಿಬಿಡುತ್ತಾರೆ.. ಭಗವಂತನ ಆರಾಧನೆಯಲ್ಲಿ ತೊಡಗುತ್ತಾರೆ.. ಯುಗಾದಿಯನ್ನು ಹೊಸ ವರ್ಷದಂತೆ ಆಚರಿಸುವ ಇವರು, ರಂಜಾನ್ ಹಬ್ಬದಂತೆಯೇ ಯುಗಾದಿಯನ್ನೂ ಆಚರಣೆ ಮಾಡುತ್ತಾರೆ.. ಕಡಪ ವೆಂಕಟೇಶ್ವರನಿಗೆ ವಿಶೇಷ ವ್ರತಾಚರಣೆ ಮಾಡುತ್ತಾರೆ.. ಮಾಂಸಾಹಾರ ತ್ಯಜಿಸಿ, ಭಗವಂತನಿಗೆ ಅನ್ನ, ಮಸಾಲೆಯುಕ್ತ ಆಹಾರ ಮತ್ತು ಬೆಲ್ಲವನ್ನು ಅರ್ಪಿಸಲಾಗುತ್ತದೆ. ಯುಗಾದಿಯ ದಿನ ಪ್ರತಿಯೊಬ್ಬ ಮುಸಲ್ಮಾನನೂ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.