CrimeNational

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಕುತ್ತಿಗೆಗೆ ಇರಿದುಕೊಂಡ ಬಾಲಕಿ!

ಮಧ್ಯಪ್ರದೇಶ; ವ್ಯಕ್ತಿಯೊಬ್ಬ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದುದರಿಂದ ಬೇಸತ್ತ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಎಲ್ಲರ ಮುಂದೆಯೇ ಹಲವಾರು ಬಾರಿ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸೆಮಾರಿಯಾ ಎಂಬಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಜಪ್ತಿ ಮಾಡಿದ್ದ 72 ಲಕ್ಷ ರೂ. ದುರ್ಬಳಕೆಮಾಡಿಕೊಂಡ ಪೊಲೀಸಪ್ಪ!

ಶಾಲಾ ಯೂನಿಫಾರ್ಮ್‌ನಲ್ಲಿದ್ದ ವಿದ್ಯಾರ್ಥಿನಿ ಮಾರುಕಟ್ಟೆಯ ಬಳಿಯೇ ಅಂಗಡಿಯೊಂದರಿಂದ ಚಾಕು ತೆಗೆದುಕೊಂಡು ಕುತ್ತಿಗೆಗೆ ಇರಿದುಕೊಂಡಿದ್ದಾಳೆ.. ಕೂಡಲೇ ಅಲ್ಲಿದ್ದವರು ಆಕೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ..
ಸಿರಾಜ್‌ ಅಹ್ಮದ್‌ ಎಂಬಾತ ಪದೇ ಪದೇ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದನಂತೆ.. ಆಗಸ್ಟ್‌ 13ರಂದು ಕೂಡಾ ಆತ ಹಿಂಬಾಲಿಸಿದ್ದು, ಬೆದರಿಕೆ ಕೂಡಾ ಒಡ್ಡಿದ್ದಾನೆ.. ಇದರಿಂದ ಬೇಸತ್ತ ಆಕೆ, ಚಮ್ಮಾರನ ಅಂಗಡಿ ಬಳಿ ಬಂದು ಇದ್ದಕ್ಕಿದ್ದಂತೆ ಚಾಕು ತೆಗೆದುಕೊಂಡು ಇರಿದುಕೊಂಡಿದ್ದಾಳೆ.. ಸದ್ಯ ಆಕೆಯನ್ನು ರೇವಾ ಸಂಜಯ್‌ ಗಾಂಧಿ ವೈದ್ಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..

ಇದನ್ನೂ ಓದಿ; ಬಸ್‌ನಲ್ಲೇ ಯುವತಿ ಮೇಲೆ 5 ಮಂದಿಯಿಂದ ಸಾಮೂಹಿಕ ಅತ್ಯಾಚಾರ!

Share Post