ರಾಖಿ ಹಬ್ಬಕ್ಕೆ ತವರಿಗೆ ಹೋಗ್ತೀನೆಂದ ಪತ್ನಿ; ಮೂಗು ಕತ್ತರಿಸಿದ ಪತಿ!
ಲಕ್ನೋ (Uttarpradesh); ಹೆಂಡತಿ ತವರಿಗೆ ಹೋಗಬೇಕು ಎಂದಿದ್ದಕ್ಕೆ ಗಂಡ ಆಕೆಯ ಮೂಗು ಕತ್ತರಿಸಿದ್ದಾನೆ. ಉತ್ತರ ಪ್ರದೇಶದ ಹಾರ್ಡೋಯಿ ಜಿಲ್ಲೆಯ ಬನಿಯಾನಿ ಪುರ್ವಾದಲ್ಲಿ ಈ ಘಟನೆ ನಡೆದಿದೆ.. ಭಾನುವಾರ ಮಹಿಳೆ ನಾಳೆ ರಾಖಿ ಹಬ್ಬ ಇದೆ ಸಹೋದರರಿಗೆ ರಾಖಿ ಕಟ್ಟಬೇಕು ತವರಿಗೆ ಹೋಗುತ್ತೇನೆ ಎಂದು ಗಂಡನಿಗೆ ಹೇಳಿದ್ದಾಳೆ.. ಇಷ್ಟಕ್ಕೇ ಆಕ್ರೋಶಗೊಂಡ ಗಂಡ ಆಕೆಯ ಮೂಗು ಕತ್ತರಿಸಿದ್ದಾನೆ.
ಇದನ್ನೂ ಓದಿ; ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!
25 ವರ್ಷದ ಅನಿತಾ ಎಂಬಾಕೆಯೇ ಗಂಡನ ದಾಳಿಗೆ ತುತ್ತಾದ ಮಹಿಳೆ.. ಅನಿತಾಗೆ ತೀವ್ರ ರಕ್ತಸ್ರಾವ ಆಗುತ್ತಿರುವುದನ್ನು ಕಂಡ ಅಕ್ಕಪಕ್ಕದ ಜನ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಲಕ್ನೋದ ಟ್ರಾಮಾ ಸೆಂಟರ್‌ಗೆ ಸ್ಥಳಾಂತರ ಮಾಡಲಾಗಿದೆ.. ರಾಹುಲ್ ಎಂಬಾತನೇ ತನ್ನ ಹೆಂಡತಿಯ ಮೂಗು ಕತ್ತರಿಸಿದಾತ.. ಗಂಡನ ಕ್ರೌರ್ಯದ ಬಗ್ಗೆ ಅನಿತಾ ವಿವರವಾಗಿ ಹೇಳಿ ಗೋಳು ತೋಡಿಕೊಂಡಿದ್ದಾಳೆ.. ಆರೋಪಿ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..
ಇದನ್ನೂ ಓದಿ; ಸುದ್ದಿಗೋಷ್ಠಿ ವೇಳೆ ಕುಸಿದುಬಿದ್ದ ಸಿದ್ದರಾಮಯ್ಯ ಬೆಂಬಲಿಗ ಸಾವು!