Lifestyle

ಬೆಟ್ಟದ ನೆಲ್ಲಿಕಾಯಿ ಕ್ಯಾಂಡಿ ಮಾಡುವ ವಿಧಾನ

ನೆಲ್ಲಿಕಾಯಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹಳ್ಳಿಯಲ್ಲಿ ಸಿಗುವ ನೆಲ್ಲಕಾಯಿ ಅಂದರೆ ಇನ್ನಷ್ಟು ಪಂಚಪ್ರಾಣ. ಇದ್ದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯ ಮದ್ದು ಆಗಿದೆ. ಜೀರ್ಣಕ್ರಿಯೆಗೆ ಒಳ್ಳೆಯದು ಅಂತ ಕೆಲವರು ಉಪ್ಪು ನೀರಿನಲ್ಲಿ ನೆಲ್ಲಿಕಾಯಿ ನೆನೆ ಹಾಕಿ ಬಿಸಿಲಿನಲ್ಲಿ ಒಣಗಿಸಿ ತುಂಬಾ ದಿನ ಇಟ್ಟುಕೊಳ್ಳುತ್ತಾರೆ. ನೆಲ್ಲಿಕಾಯಿಯಿಂದ ನಾನಾ ತರಹದ ಅಡುಗೆ ಮಾಡುತ್ತಾರೆ. ಅದರಲ್ಲೂ ಹಳ್ಳಿಕಡೆ ಮಾಡುವ
ನೆಲ್ಲಿಕಾಯಿ ಕ್ಯಾಂಡಿ ಅಂದರೆ ಸಾಕು ಹಾಗೇ ಬಾಯಿಲ್ಲಿ ನೀರು ಬರುತ್ತದೆ. ಅದನ್ನು ನಾವು ಹೇಗೆ ಮಾಡೋದು ಅಂತಾ ನೋಡೋಣ ಬನ್ನಿ

ಬೇಕಾಗುವ ಪದಾರ್ಥಗಳು
10 – 12 ನೆಲ್ಲಿಕಾಯಿ
1/2 ಕಪ್ ಸಕ್ಕರೆ
1/4 ಟೀಸ್ಪೂನ್ ಉಪ್ಪು
ಮಾಡುವ ವಿಧಾನ:
ನೆಲ್ಲಿಕಾಯಿಯನ್ನು ತೊಳೆಯಿರಿ. ಹತ್ತು ನಿಮಿಷ ಅಥವಾ ಮೆತ್ತಗಾಗುವವರೆಗೆ ಆವಿಯಲ್ಲಿ ಇಡ್ಲಿ ಬೇಯಿಸಿದ ಹಾಗೆ ಬೇಯಿಸಿ.ಸ್ವಲ್ಪ ಬಿಸಿ ಆರಿದ ಮೇಲೆ ನೆಲ್ಲಿಕಾಯಿ ಗೆರೆಯ ಮೇಲೆ ಕತ್ತರಿಸಿ, ಬೀಜ ತೆಗೆಯಿರಿ.
1/4 ಕಪ್ ಸಕ್ಕರೆ ಮತ್ತು 1/4 ಟೀಸ್ಪೂನ್ ಹಾಕಿ ಕಲಸಿ 5 – 6 ಘಂಟೆ ಪಕ್ಕಕ್ಕಿಡಿ.ನೆಲ್ಲಿಕಾಯಿ ಬಿಟ್ಟ ನೀರನ್ನು ಬಸಿದು ತೆಗೆಯಿರಿ.
ಪುನಃ 1/4 ಕಪ್ ಸಕ್ಕರೆ ಹಾಕಿ ಕಲಸಿ. 2 – 3 ದಿನ ಬಿಸಿಲಿನಲ್ಲಿ ಒಣಗಲು ಬಿಡಿ. ಹೀಗೆ ಮಾಡಿದರೆ ಇದನ್ನು ವರ್ಷವೀಡಿ ಇಟ್ಟುಕೊಂಡು ತಿನ್ನಬಹುದು

Share Post