Lifestyle

Sleep divorce; ಗಂಡ-ಹೆಂಡತಿಯೇ ಆದರೂ ಮಲಗೋದು ಬೇರೆ ಬೇರೆ!

ಬೆಂಗಳೂರು; ಕೊವಿಡ್‌ ಸಂದರ್ಭ ಹಾಗೂ ಕೊವಿಡ್‌ ನಂತರದಲ್ಲಿ ಜನರ ಅಭ್ಯಾಸಗಳು ಸಾಕಷ್ಟು ಬದಲಾಗಿವೆ.. ಅದ್ರಲ್ಲೂ ಸ್ಲೀಪ್‌ ಡಿವೋರ್ಸ್‌ (Sleep Divorce) ಅಭ್ಯಾಸಗಳು ದಂಪತಿಗಳಲ್ಲಿ ಹೆಚ್ಚಾಗಿವೆ. ಗಂಡ-ಹೆಂಡತಿಯೇ ಆಗಿದ್ದರೂ, ಇಬ್ಬರೂ ಬೇರೆ ಬೇರೆ ಕೋಣೆಗಳಲ್ಲಿ ಮಲಗುವ ಸಂಪ್ರದಾಯ ಬೆಳೆದುಬಿಟ್ಟಿದೆ. ಮೊದಲು, ದಂಪತಿ ಜಗಳವಾಡಿಕೊಂಡಾಗ ಬೇರೆ ಬೇರೆಯಾಗಿ ಮಲಗೋದನ್ನು ನೋಡಿದ್ದೆವು. ಆದ್ರೆ, ಅನ್ಯೋನ್ಯವಾಗಿದ್ದರೂ, ದಂಪತಿಗಳು ಬೇರೆಬೇರೆಯಾಗಿ ಮಲಗುತ್ತಿದ್ದಾರೆ.. ಇಂತಹದ್ದೊಂದು ಅಭ್ಯಾಸವನ್ನು ಕೋಟ್ಯಂತರ ಜನ ರೂಢಿಸಿಕೊಂಡಿದ್ದಾರೆ ಅಂತ ಅಧ್ಯಯನವೊಂದು ಹೇಳಿದೆ. ಈ ಅಭ್ಯಾಸಕ್ಕೆ ಕಾರಣಗಳನ್ನು ಕೂಡಾ ಹುಡುಕಲಾಗಿದೆ.

ಅರ್ಧದಷ್ಟು ದಂಪತಿಗಳು ಪತ್ಯೇಕವಾಗಿ ಮಲಗುತ್ತಾರೆ;

ಕೋವಿಡ್ -19 ಸಾಂಕ್ರಾಮಿಕದ ನಂತರ, ಅನೇಕ ದಂಪತಿಗಳು ಈ ರೀತಿ ಬೇರೆ ಬೇರೆಯಾಗಿ ಮಲಗಲು ಪ್ರಾರಂಭಿಸಿದ್ದಾರೆ. ಅಮೆರಿಕದಲ್ಲಿ ಸಂಗಾತಿಗಳು ಬೇರೆ ಕೋಣೆಯಲ್ಲಿ ಮಲಗುವುದು ಉತ್ತಮ ನಿದ್ರೆಗಾಗಿ ಎಂಬುದು ಅಧ್ಯಯನದಿಂದ ಬಯಲಾಗಿದೆ.  ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ (AASM) ನಡೆಸಿದ 2023 ರ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಇದನ್ನೇ ಹೇಳಿದ್ದಾರೆ.

ಸಮೀಕ್ಷೆ ಮಾಡಿದ ಮಿಲೇನಿಯಲ್‌ಗಳಲ್ಲಿ ಅರ್ಧದಷ್ಟು, 43 ಪ್ರತಿಶತ, ತಮ್ಮ ಪಾಲುದಾರರಿಂದ ಪ್ರತ್ಯೇಕವಾಗಿ ಮಲಗುತ್ತಾರೆ. ಇತರ ವಯಸ್ಸಿನ ಗುಂಪುಗಳು, ಅಂದರೆ 1965 ರಿಂದ 1980 ರ ಮಧ್ಯದ ನಡುವೆ ಜನಿಸಿದ ಜನರೇಷನ್ X 33 ಪ್ರತಿಶತ, 1997 ರಿಂದ 2012 ರ ನಡುವೆ ಜನಿಸಿದ ಜನರೇಷನ್ Z ಗುಂಪು 28 ಪ್ರತಿಶತ ಮತ್ತು ಕೊನೆಯದಾಗಿ 1946 ರಿಂದ 1964 ರ ನಡುವೆ ಜನಿಸಿದವರು 22 ಪ್ರತಿಶತದಷ್ಟು ಜನರು ಪ್ರತ್ಯೇಕ ಕೊಠಡಿಗಳಲ್ಲಿ ಮಲಗುತ್ತಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

ಪ್ರಾಚೀನ ಕಾಲದಲ್ಲಿ ಈ ಪದ್ಧತಿ ಇತ್ತು;

ಪ್ರಾಚೀನ ಕಾಲದಲ್ಲಿ ದಂಪತಿಗಳು ಪ್ರತ್ಯೇಕ ಕೋಣೆಗಳಲ್ಲಿ ಮಲಗುವುದು ಸಾಮಾನ್ಯವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಇತಿಹಾಸವನ್ನು ನೋಡಿದರೆ, ಹಿಂದೆ ಡಬಲ್‌ ಬೆಡ್‌ ಕಾನ್ಸೆಪ್ಟೇ ಇರಲಿಲ್ಲ. ದಂಪತಿಗಳು ಯಾವಾಗಲೂ ಪ್ರತ್ಯೇಕವಾಗಿಯೇ ಮಲಗುತ್ತಿದ್ದರು. 19 ನೇ ಶತಮಾನದ ಮೊದಲು, ವಿವಾಹಿತ ದಂಪತಿಗಳು ಪ್ರತ್ಯೇಕ ಕೋಣೆಗಳಲ್ಲಿ ಮಲಗುವುದು ಸಾಮಾನ್ಯವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.

ಪ್ರತ್ಯೇಕ ಮಲಗುವುದರಿಂದ ಏನು ಪ್ರಯೋಜನ..?;

 ಪ್ರತ್ಯೇಕ ಕೊಠಡಿಗಳಲ್ಲಿ ಮಲಗಲು ಬಯಸುವ ದಂಪತಿಗಳಿಗೆ ಕೆಲವು ಪ್ರಯೋಜನಗಳಿವೆ ಎಂದು ತಜ್ಞರು ಸಹ ಒಪ್ಪುತ್ತಾರೆ. ಗಾಢ ನಿದ್ರೆಗೆ ಒಗ್ಗಿಕೊಳ್ಳುವುದು ಮುಖ್ಯ ಪ್ರಯೋಜನ ಎಂದು ಹೇಳಲಾಗುತ್ತದೆ. ಮನುಷ್ಯನು ಉತ್ತಮವಾಗಿ ಬದುಕಲು ಉತ್ತಮ ನಿದ್ರೆ ಅತ್ಯಗತ್ಯ. ಒಬ್ಬ ವ್ಯಕ್ತಿಯು ಸರಿಯಾಗಿ ನಿದ್ದೆ ಮಾಡದಿದ್ದರೆ, ಅವನ ಪ್ರತಿರಕ್ಷಣಾ ವ್ಯವಸ್ಥೆಯಿಂದ ಹಿಡಿದು ದೇಹದ ಅಂಗಗಳ ಕಾರ್ಯನಿರ್ವಹಣೆಯವರೆಗೆ ಎಲ್ಲದರ ಮೇಲೂ ಪರಿಣಾಮ ಬೀರಬಹುದು. ಅಲ್ಲದೆ, ಸರಿಯಾಗಿ ನಿದ್ದೆಯಾಗದಿದ್ದರೆ ಬೇಗನೆ ಕೋಪಗೊಳ್ಳುತ್ತಾನೆ. ತಾಳ್ಮೆ ಇರುವುದಿಲ್ಲ. ಅವರು ಸ್ವಲ್ಪ ಖಿನ್ನತೆಗೆ ಒಳಗಾಗುತ್ತಾರೆ ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯಕರ ಸಂಬಂಧಕ್ಕೆ ಸ್ಲೀಪ್ ಡೈವೋರ್ಸ್ ಅಗತ್ಯ!;

ಪಾಲುದಾರರೊಂದಿಗೆ ಉತ್ತಮ ಮತ್ತು ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಲು ‘ಸ್ಲೀಪ್ ಡೈವೋರ್ಸ್’ ಅನ್ನು ಬಳಸಬಹುದು ಎಂದು ಮನೋವೈದ್ಯರು ನಂಬುತ್ತಾರೆ. ಸರಿಯಾಗಿ ನಿದ್ದೆ ಮಾಡದ ದಂಪತಿಗಳನ್ನು ನೋಡಿದರೆ ಅವರು ಜಗಳವಾಡುವ ಸಾಧ್ಯತೆ ಹೆಚ್ಚು. ಅವರು ಆಗಾಗ್ಗೆ ಕಿರಿಕಿರಿಗೊಳ್ಳುತ್ತಾರೆ. ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುತ್ತಾರೆ. ಕೆಲವರು ಒಂಟಿಯಾಗಿ ಮಲಗಿದಾಗ ಚೆನ್ನಾಗಿ ನಿದ್ದೆ ಮಾಡುತ್ತಾರೆ.

ಸರಿಯಾದ ನಿದ್ರೆಯ ಕೊರತೆಯು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಸರಿಯಾಗಿ ನಿದ್ದೆ ಮಾಡದವರು ತಮ್ಮ ಸಂಗಾತಿಯೊಂದಿಗೆ ಜಗಳವಾಡುವ ಸಾಧ್ಯತೆ ಹೆಚ್ಚು. ನಿದ್ರೆಯಲ್ಲಿನ ಅಡಚಣೆಗಳು ಅವರ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ.

AASM ಕೂಡ ‘ಸ್ಲೀಪ್ ಡೈವೋರ್ಸ್’ ಬಗ್ಗೆ ತನ್ನ ಅಧ್ಯಯನವನ್ನು ಪ್ರಾರಂಭಿಸಿತು. ಆರೋಗ್ಯ ಮತ್ತು ಸಂತೋಷಕ್ಕೆ ಉತ್ತಮ ನಿದ್ರೆ ಅತ್ಯಗತ್ಯ. ಕೆಲವು ದಂಪತಿಗಳು ಆರೋಗ್ಯಕರ ಮತ್ತು ಸಂತೋಷದ ಜೀವನಕ್ಕಾಗಿ ಪ್ರತ್ಯೇಕವಾಗಿ ಮಲಗಲು ಆಯ್ಕೆ ಮಾಡಿಕೊಳ್ಳುವುದು ದೊಡ್ಡ ಆಶ್ಚರ್ಯವಲ್ಲ ಎಂದು ಈ ಅಧ್ಯಯನದಿಂದ ಗೊತ್ತಾಗಿದೆ.

Share Post