CrimeDistricts

ನಾಯಿ ತಪ್ಪಿಸಲು ಹೋಗಿ ಬೈಕ್ ಸ್ಕಿಡ್; ನವವಿವಾಹಿತೆ ಸಾವು!

ಉಡುಪಿ; ನವ ವಿವಾಹಿತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನಾಯಿ ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋಗಿ ಸ್ಕಿಡ್ ಆಗಿ ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ.. ಉಡುಪಿಯ ಹೊಸ್ಮಾರು ಬಳಿ ಈ ಘಟನೆ ನಡೆದಿದೆ..

  ಕಾರ್ಕಳ ಗುರುವಾಯನಕೆರೆ ರಸ್ತೆಯಲ್ಲಿ ಹೊಸ್ಮಾರು ಸೇತುವೆ ಬಳಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.. 26 ವರ್ಷದ ನೀಕ್ಷಾ ಎಂಬಾಕೆ ಸಾವನ್ನಪ್ಪಿದ್ದಾಳೆ.. ಗಂಡನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ನಾಯಿ ಅಡ್ಡ ಬಂದಿದೆ.. ಈ ವೇಳೆ ನಾಯಿ ತಪ್ಪಿಸಲು ಹೋದಾಗ ಬೈಕ್ ಸ್ಕಿಡ್ ಆಗಿ ಬಿದ್ದು ಈ ದುರ್ಗಟನೆ ನಡೆದಿದೆ.

ಮೃತ ನೀಕ್ಷಾ ಈದು ಗ್ರಾಮ ಕರೆಂಬಾಲುವಿನ ವಿಶಾಲ್‌ ಅವರ ಪತ್ನಿ ಎಂದು ಗೊತ್ತಾಗಿದೆ. ಎರಡು ತಿಂಗಳ ಹಿಂದಷ್ಟೇ ಇವರ ಮದುವೆಯಾಗಿತ್ತು..

Share Post