HealthInternational

ಸಿಂಗಾಪುರಕ್ಕೂ ಕಾಲಿಟ್ಟ ಒಮಿಕ್ರಾನ್;‌ ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಿಗೆ ಸೋಂಕು..!

ಸಿಂಗಾಪುರ: ಈಗಾಗಲೇ 15ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್‌ ಸೋಂಕು ಈಗ ಸಿಂಗಾಪುರಕ್ಕೂ ವಕ್ಕರಿಸಿದೆ. ಸಿಂಗಾಪುರದಲ್ಲಿ ಇಬ್ಬರಿಗೆ ಒಮಿಕ್ರಾನ್‌ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.


ದಕ್ಷಿಣ ಆಫ್ರಿಕಾದಿಂದ ಬಂದವರನ್ನು ಪರೀಕ್ಷೆಗೊಳಪಡಿಸಿದಾಗ ಇಬ್ಬರಿಗೆ ಒಮಿಕ್ರಾನ್‌ ಇರುವುದು ಪತ್ತೆಯಾಗಿದೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಸಿಂಗಾಪುರ ಏರ್‌ಲೈನ್ಸ್ (ಎಸ್‌ಐಎ) ಎಸ್‌ಕ್ಯು 479 ವಿಮಾನದಲ್ಲಿ ಸೋಂಕಿತರು ಆಗಮಿಸಿದ್ದರು. ಡಿಸೆಂಬರ್ 1ರಂದು ಸಿಂಗಾಪುರಕ್ಕೆ ಆಗಮಿಸಿದ ಕೂಡಲೇ ಇಬ್ಬರನ್ನೂ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ. ಹಾಗಾಗಿ, ಬೇರೆ ಸಮುದಾಯದ ಜೊತೆ ಸಂವಹನ ನಡೆಸಿಲ್ಲ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ಹೇಳಿದೆ. ಇಬ್ಬರೂ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಕೆಮ್ಮು ಮತ್ತು ಗಂಟಲು ಕೆರೆತದ ಸೌಮ್ಯ ಲಕ್ಷಣಗಳನ್ನು ಅವರು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

Share Post