14 ವರ್ಷದ ಸಹೋದರನಿಂದ ಗರ್ಭಿಣಿಯಾದ 12ರ ಬಾಲಕಿ; ಗರ್ಭಪಾತಕ್ಕೆ ಕೋರ್ಟ್ ಅಸ್ತು!
ಮುಂಬೈ; ಇಬ್ಬರೂ ಅಪ್ರಾಪ್ತರು.. ಇನ್ನೂ ಏನೂ ಅರಿಯದ ವಯಸ್ಸು.. ಇಬ್ಬರೂ ಅಣ್ಣ-ತಂಗಿ ಬೇರೆ.. ಅಣ್ಣನಿಗೆ 14 ವರ್ಷವಾದರೆ, ತಂಗಿಗೆ 12 ವರ್ಷ.. 14 ವರ್ಷದ ಸಹೋದರನಿಂದಲೇ 12 ವರ್ಷದ ಸಹೋದರಿ ಅತ್ಯಾಚಾರಕ್ಕೊಳಗಾಗಿದ್ದಳು.. ಇದರಿಂದ ಆಕೆ ಗರ್ಭವತಿಯಾಗಿ ಆರು ತಿಂಗಳೂ ಆಗಿದೆ.. ಈ ವಿಷಯ ಗೊತ್ತಾಗುತ್ತಿದ್ದಂತೆ ಬಾಲಕಿಯ ತಾಯಿ ಕಂಗಾಲಾಗಿದ್ದಾರೆ.. ಗರ್ಭಪಾತಕ್ಕೆ ಅನುಮತಿ ನೀಡುವಂತೆ ಆಕೆ ಕೋರ್ಟ್ ಮೆಟ್ಟಿಲೇರಿದ್ದಳು.. ಇದೀಗ ಬಾಂಬೆ ಹೈಕೋರ್ಟ್, ಚಾಲಕಿಯ ಗರ್ಭಪಾತಕ್ಕೆ ಅವಕಾಶ ಮಾಡಿಕೊಟ್ಟಿದೆ.. ಇದರಿಂದ ಆ ತಾಯಿ ನಿಟ್ಟುಸಿರು ಬಿಟ್ಟಿದ್ದಾಳೆ..
ಬಾಂಬೆ ಹೈಕೋರ್ಟ್‌ನ ರಜಾ ಕಾಲದ ಪೀಠದ ನ್ಯಾಯಮೂರ್ತಿಗಳಾದ ಸಂದೀಪ್ ಮರ್ನೆ ಹಾಗೂ ನೀಲಾ ಗೋಖಲೆ ಅವರು ವೈದ್ಯಕೀಯ ಸಮಿತಿ ಸಲ್ಲಿಸಿದ ವರದಿ ಆಧರಿಸಿ ಈ ಮಹತ್ವದ ತೀರ್ಪು ನೀಡಿದ್ದಾರೆ.. ಬಾಲಕಿ ಈ ತಿಂಗಳ ಆರಂಭದಲ್ಲಿ ಹೊಟ್ಟೆ ನೋವೆಂದು ಹೇಳುತ್ತಿದ್ದಳು.. ಈ ವೇಳೆ ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದ್ದಾರೆ.. ಈ ವೇಳೆ ಆಕೆ ಗರ್ಭಿಣಿಯಾಗಿರೋದು ಗೊತ್ತಾಗಿದೆ.. ಆಗ ವಿಚಾರಿಸಿದಾಗ ಅಣ್ಣನೇ ಅತ್ಯಾಚಾರ ಎಸಗಿರುವ ಬಗ್ಗೆ ಬಾಯ್ಬಿಟ್ಟಿದ್ದಾಳೆ.. ಭಾರತೀಯ ದಂಡ ಸಂಹಿತೆಯ ಅಡಿ ಬರುವ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ ಪೋಸ್ಕೋದಡಿ ಬಾಲಕಿಯ ಅಣ್ಣನ ವಿರುದ್ಧ ಕೇಸು ದಾಖಲಿಸಿದ ಪೊಲೀಸರು ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದರು.
ಗರ್ಭಾವಸ್ಥೆ ಮುಂದುವರೆದರೆ ಬಾಲಕಿ ಗಂಭೀರವಾದ ಮಾನಸಿಕ ಹಾಗೂ ದೈಹಿಕ ನೋವನ್ನು ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ..