Lifestyle

ಮನೆಯಲ್ಲಿರುವ ನೆಗೆಟಿವ್‌ ಎನರ್ಜಿ ಕಂಡು ಹಿಡಿಯೋದು ಹೇಗೆ..?

ಮನೆ ಅಂದವಾಗಿ ಕಂಡರೂ ಏನೋ ದೋಷವಿದೆ ಎಂದೆನಿಸುತ್ತಿರುತ್ತದೆ. ಇದರಿಂದಾಗಿ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಇದಕ್ಕೆಲ್ಲ ಮನೆಯೊಳಗೆ ನುಗ್ಗಿರುವ ನಕಾರಾತ್ಮಕ ಶಕ್ತಿಗಳೇ ಕಾರಣ ಎನ್ನುತ್ತಾರೆ ವಾಸ್ತು ತಜ್ಞರು. ಹಾಗಾದರೆ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸಿವೆ ಎಂದು ತಿಳಿಯಲು ಏನು ಮಾಡಬೇಕು..? ಅವುಗಳನ್ನು ತಿಳಿಯೋದು ಹೇಗೆ..? ಈ ಕುರಿತ ಕೆಲ ಸಲಹೆಗಳು ಇಲ್ಲಿವೆ.

ಎಷ್ಟೇ ಕಷ್ಟವಾದರೂ ಪ್ರತಿ ಹೆಜ್ಜೆಯಲ್ಲೂ ಅಡೆತಡೆ ಇದ್ದೇ ಇರುತ್ತದೆ. ಕೈಗೆ ಬಂದ ತುತ್ತು ಜಾರಿ ಬಿದ್ದರೆ ಖಂಡಿತ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದರ್ಥ.

*ಕಣ್ಣೆದುರು ಹಲವು ಅವಕಾಶಗಳಿದ್ದರೂ ಆತ್ಮವಿಶ್ವಾಸದ ಕೊರತೆ ಇರುವುದು ಮನೆಯಲ್ಲಿನ ನೆಗೆಟಿವ್‌ ಎನರ್ಜಿಯೇ ಕಾರಣ

*ಮನೆಯಲ್ಲಿ ಯಾರಾದರೂ ಮಾನಸಿಕವಾಗಿ ಬಳಲುತ್ತಿದ್ದರೆ, ಅವರಿಗೆ ಯಾವುದೇ ಚಿಕಿತ್ಸೆ ಸಹಾಯವಾಗುವುದಿಲ್ಲ

* ಒಳ್ಳೆಯ ಫಲಿತಾಂಶ ಬರುವ ಸಮಯದಲ್ಲಿ ಹೆಚ್ಚು ಮಾಡುವುದು ವ್ಯರ್ಥ ಎಂದು ಮಧ್ಯದಲ್ಲಿ ಬಿಟ್ಟುಕೊಡುವುದು

* ಕೌಟುಂಬಿಕ ಕಲಹಗಳು ಹೆಚ್ಚಾಗಿರುವುದು

 ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವುದು ಹೇಗೆ..?

* ನಿಮ್ಮ ಮನೆಯ ಕೋಣೆಯ ಮೂಲೆಗಳಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ. 48 ಗಂಟೆಗಳ ನಂತರ ತೆಗೆದುಹಾಕಿ.

*ಮನೆಯ ಮುಖ್ಯ ಬಾಗಿಲಿನ ಮುಂದೆ ಗಂಟೆಯನ್ನು ಅಳವಡಿಸಿ. ಆ ಧ್ವನಿ ಧನಾತ್ಮಕ ಕಂಪನಗಳನ್ನು ಸೃಷ್ಟಿಸುತ್ತದೆ

* ಮನೆಯಲ್ಲಿರುವ ಒಡೆದ ಅಥವಾ ಹಾಳಾದ ವಸ್ತುಗಳನ್ನು ತಕ್ಷಣವೇ ತೆಗೆಯಿರಿ

*ಹಳದಿ ಬಣ್ಣವು ಶುಭವನ್ನು ಸೂಚಿಸುತ್ತದೆ. ಮನೆಯಲ್ಲಿರುವ ಕೋಣೆಗಳಿಗೆ ತಿಳಿ ಹಳದಿ ಬಣ್ಣ ಬಳಿಯಿರಿ

* ಕೋಣೆಗಳ ಎಲ್ಲಾ ಮೂಲೆಗಳಲ್ಲಿ ಧೂಪದ್ರವ್ಯವನ್ನು ಉರಿಸುತ್ತಿರಿ

Share Post