InternationalLifestyle

23ರ ಚೆಲುವೆಯನ್ನು ಮದುವೆಯಾದ 80ರ ಮುದುಕ!; ಹುಡುಗರಿಗೆ ಹೊಟ್ಟೆಕಿಚ್ಚು!

ಬೀಜಿಂಗ್; ಇತ್ತೀಚೆಗೆ ಜನ ವಯಸ್ಸಿನ ಮಿತಿ ಇಲ್ಲದೆ ಪ್ರೀತಿಯಲ್ಲಿ ಬೀಳುತ್ತಿದ್ದಾರೆ.. ವಯಸ್ಸಿನ ಅಂತರ ಎಷ್ಟೇ ಇದ್ದರೂ ಪರವಾಗಿಲ್ಲ ಎಂಬ ಮನಸ್ಥಿತಿ ಹೆಚ್ಚಾಗುತ್ತಿದೆ.. ಇದಕ್ಕೆ ಒಂದು ಉದಾಹರಣೆ ಚೀನಾದ ಈ ಒಂದು ಜೋಡಿ.. ಇಲ್ಲಿ ವರನಿಗೆ 80 ವರ್ಷ ವಯಸ್ಸಾಗಿದೆ.. ಈತನ ಪ್ರೀತಿಗೆ 23 ವರ್ಷದ ಚೆಲುವೆ ಮನ ಸೋತಿದ್ದಾಳೆ.. ಇಬ್ಬರೂ ಇತ್ತೀಚೆಗೆ ಮದುವೆ ಕೂಡಾ ಆಗಿದ್ದಾರೆ..

23 ವರ್ಷದ ಸುರಸುಂದರಿ ಚೀನಾದ ರಾಜಧಾನಿ ಬೀಜಿಂಗ್‌ನ ವೃದ್ಧಾಶ್ರಮವೊಂದರಲ್ಲಿ ಸ್ವಯಂ ಸೇವಕಳಾಗಿ ಕೆಲಸ ಮಾಡುತ್ತಿದ್ದಳು.. ಈ ವೇಳೆ ವೃದ್ಧಾಶ್ರಮ ಸೇರಿದ್ದ 80 ವರ್ಷದ ಮುದುಕ ಆಕೆಗೆ ಪರಿಚಯವಾಗಿದ್ದಾರೆ.. ಅವರ ಈ ಸ್ನೇಹ ಪ್ರೀತಿಗೆ ತಿರುಗಿದೆ.. ಒಬ್ಬರಿಗೊಬ್ಬರು ಪ್ರೀತಿಸಲಾರಂಭಿಸಿದ್ದಾರೆ.. ಮುದುಕ ಜ್ಞಾನ ಹಾಗೂ ಪ್ರಬುದ್ಧತೆಯಿಂದಾಗಿ ಆಕೆ ಆಕರ್ಷಿತಳಾಗಿದ್ದಾಳೆ.. ಇಬ್ಬರೂ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಇಬ್ಬರೂ ಮದುವೆಯಾಗಲು ತೀರ್ಮಾನಿಸುತ್ತಾರೆ.. ನಂತರ ಯುವತಿ ಮನೆಯಲ್ಲಿ ಈ ವಿಚಾರ ತಿಳಿಸುತ್ತಾಳೆ.. ಇದಕ್ಕೆ ಮನೆಯವರು ಸುತಾರಾಂ ಒಪ್ಪುವುದಿಲ್ಲ..

ಆದ್ರೆ ಆ ಯುವತಿ ಪಾಲಕರನ್ನು ಧಿಕ್ಕರಿಸಿ ಮನೆಯಿಂದ ಹೊರಬಂದಿದ್ದಾಳೆ.. ವೃದ್ಧಾಶ್ರಮದಲ್ಲಿದ್ದ ಮುದುಕನನ್ನು ಮದುವೆಯಾಗಿದ್ದಾಳೆ.. ಇಬ್ಬರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.. ಸುಂದರಿ ಯುವತಿಯನ್ನು ಕಂಡು ಯುವಕರು ಹೊಟ್ಟೆಕಿಚ್ಚುಪಟ್ಟುಕೊಳ್ಳುತ್ತಿದ್ದಾರೆ..

 

Share Post