InternationalLifestyle

ಇಲ್ಲಿ ಗರ್ಭಿಣಿಯರು ನಾಯಿ ತಲೆ ಬುರುಡೆ ತಿನ್ನುತ್ತಾರೆ!

ಬೀಜಿಂಗ್‌(China); ಭಾರತದಲ್ಲಿ ಜನರು ಅನೇಕ ಪದ್ಧತಿಗಳನ್ನು ರೂಢಿಸಿಕೊಂಡು ಬಂದಿದ್ದಾರೆ.. ಅದ್ರಲ್ಲೂ ಕೂಡಾ ಮಹಿಳೆ ಗರ್ಭವತಿಯಾದಾಗ ಅನೇಕ ಅಚಾರಗಳನ್ನು ನಡೆಸಿಕೊಂಡು ಬಂದಿದ್ದಾರೆ.. ಕೆಲವೊಂದು ಆಚಾರಗಳು ಮೂಢನಂಬಿಕೆಗಳಾಗಿದ್ದರೂ ಕೂಡಾ ಅವು ಈಗಲೂ ಮುಂದುವರೆದಿವೆ.. ಅದೇ ನಮ್ಮ ಪಕ್ಕದ ದೇಶ ಚೀನಾದಲ್ಲೂ ಕೂಡಾ ಒಂದು ಪದ್ಧತಿ ಇದೆ.. ಇಲ್ಲಿ ಗರ್ಭಿಣಿ ಹೆಂಗಸರು ಮಗು ಬೆಳ್ಳಗೆ ಸುಂದರವಾಗಿ ಹುಟ್ಟಬೇಕು ಅಂತ ನಾಯಿಯ ತಲೆಬುರುಡೆ ತಿನ್ನುತ್ತಾರೆ.. ಇದೊಂದು ವಿಚಿತ್ರವಾದ ನಂಬಿಕೆ.. ಆದ್ರೆ ಈಗಲೂ ಚೀನಾದ ಬಹುತೇಕ ಕಡೆ ಚಾಲ್ತಿಯಲ್ಲಿದೆ..
ನಮ್ಮಲ್ಲಿ ಮಗು ಸುಂದರವಾಗಿ ಹುಟ್ಟಬೇಕು ಅಂದ್ರೆ ಬಾದಾಮಿ, ಕೇಸರಿ ಮುಂತಾದ ಪದಾರ್ಥಗಳನ್ನು ಸೇವಿಸುವಂತೆ ಹಿರಿಯರು ಗರ್ಭಿಣಿಯರಿಗೆ ಹೇಳುತ್ತಾರೆ.. ಅದೇ ರೀತಿ ಚೀನಾದಲ್ಲಿ ಗರ್ಭಿಣಿಯರಿಗೆ ನಾಯಿ ತಲೆ ಬುರುಡೆ ಮಾಂಸದಿಂದ ತಯಾರಿಸಿದ ಅಡುಗೆ ಸೇವನೆ ಮಾಡುವಂತೆ ಸೂಚಿಸಲಾಗುತ್ತದೆ.. ಗರ್ಭಿಣಿಯರು ನಾಯಿ ತಲೆಬುರುಡೆ ಬೇಯಿಸಿಕೊಂಡು ತಿನ್ನುವುದರಿಂದ ಹುಟ್ಟುವ ಮಕ್ಕಳು ಬೆಳ್ಳಗೆ ಹಾಗೂ ಸುಂದರವಾಗಿ ಹುಟ್ಟುತ್ತಾರೆ ಎಂಬ ನಂಬಿಕೆ ಅನೇಕ ಚೀನೀಯರಲ್ಲಿದೆ..
ಸಂಶೋಧಕರಾದ ಕ್ಸಾಂಡರ್‌ ಲೀ ಅವರ ಪ್ರಕಾರ ಗರ್ಣಿಣಿ ಮಹಿಳೆಯರು ಬಿಳಿ ಬಣ್ಣದ ನಾಯಿಯ ತಲೆ ಬುರುಡೆಯನ್ನು ಬೇಯಿಸಿ ತಿಂದರೆ ಮಗು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಜನಿಸುತ್ತದೆ ಎಂದು ಇಲ್ಲಿನ ಜನ ನಂಬುತ್ತಾರಂತೆ!.

Share Post