Lifestyle

ಹುಡುಗಿಯರಲ್ಲಿ ಈ ಮೂರು ಗುಣ ಇಲ್ಲದಿದ್ದರೆ ಮದುವೆಯಾದವರಿಗೆ ನರಕ!

ಬೆಂಗಳೂರು; ಯಾವುದೇ ವ್ಯಕ್ತಿಯ ಜೀವನದಲ್ಲಿ ಮದುವೆ ಅನ್ನೋದು ಮಹತ್ತರವಾದ ಘಟ್ಟ.. ತನ್ನ ಬಾಳಿನೊಳಗೆ ಎಂಟ್ರಿ ಕೊಡುವ ಹೆಣ್ಣಿನ ನಡವಳಿಕೆ ಹೇಗಿರುತ್ತದೆ ಅನ್ನೋದರ ಮೇಲೆ ಆತನ ಜೀವನ ಸುಖವಾಗಿರುತ್ತೋ, ದುಃಖಕರವಾಗಿರುತ್ತೋ ಅನ್ನೋದು ನಿರ್ಧಾರವಾಗುತ್ತೆ.. ಹೀಗಾಗಿ, ಮದುವೆಯಾಗುವ ಹೆಣ್ಣು ಒಂದಷ್ಟು ಗುಣಲಕ್ಷಣಗಳನ್ನು ಹೊಂದಿದ್ದರೆ ಮಾತ್ರ, ಹುಡುಗನ ಬದುಕು ಸುಖಮಯವಾಗಿರುತ್ತೆ.. ಹಾಗಂತ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ಚಾಣಕ್ಯ ಹೇಳಿದ್ದಾರೆ..
ಹುಡುಗಿಯರಲ್ಲಿ ಈ ಮೂರು ಗುಣಗಳಿದ್ದರೆ ಆಕೆ ಹೋಗುವ ಅತ್ತೆ ಮನೆ ಸಂತೋಷದಿಂದ ಇರುತ್ತದೆ.. ಈ ಮೂರು ಗುಣಗಳಿಗೆ ವಿರುದ್ಧವಾಗಿದ್ದರೆ ಆಕೆ ಹೋಗುವ ಮನೆ ನರಕವಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.. ಹಾಗಾದ್ರೆ ಚಾಣಕ್ಯ ಹೇಳಿದಂತೆ ಹುಡುಗಿಯರಲ್ಲಿ ಯಾವ ಗುಣಗಳು ಮುಖ್ಯವಾಗಿರಬೇಕು.. ಆ ಮೂರು ಗುಣಗಳು ಯಾವುವು ಅನ್ನೋದನ್ನು ನೋಡೋಣ..
1. ತಾಳ್ಮೆ;
ಯಾವುದೇ ವ್ಯಕ್ತಿ ತಾಳ್ಮೆ ಬಹು ಮುಖ್ಯವಾಗುತ್ತದೆ.. ತಾಳ್ಮೆ ಇಲ್ಲದ ವ್ಯಕ್ತಿ ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾನೆ.. ಅದ್ರಲ್ಲೂ ಕೂಡಾ ಪತ್ನಿಯಲ್ಲಿ ತಾಳ್ಮೆಯ ಗುಣ ಇದ್ದರೆ ಆಕೆ ಇರುವ ಮನೆ ಸಂತೋಷದಿಂದ ಕೂಡಿರುತ್ತದೆ.. ಯಾಕಂದ್ರೆ ನೂರು ಜಂಜಾಟಗಳು, ಹೊರಹೋಗಿ ಹಲವು ಕೆಲಸಗಳನ್ನು ಮಾಡಿ ಒತ್ತಡದಿಂದ ಮನೆಗೆ ಬಂದ ಗಂಡನನ್ನು ತಾಳ್ಮೆಯಿಂದ ಮತನಾಡಿಸದೇ ಹೋದರೆ ಮನೆಯಲ್ಲಿ ದಿನವೂ ಜಗಳ ರಂಪಾಟಗಳೇ ನಡೆಯುತ್ತವೆ.. ಕೆಲಸದ ಒತ್ತಡದಲ್ಲಿ ಗಂಡ ತಾಳ್ಮೆ ಕಳೆದುಕೊಂಡು ಮನೆಗೆ ಬಂದಿರುತ್ತಾರೆ.. ಆಗ ಹೆಂಡತಿಗಾದರೂ ತಾಳ್ಮೆ ಇರಬೇಕು.. ಹೆಂಡತಿಯೂ ಕೂಡಾ ತಾಳ್ಮೆ ಕಳೆದುಕೊಂಡು ಗಂಡನ ವಿರುದ್ಧ ಕಿರುಚಾಡುವಂತಾದರೆ ಆ ಮನೆಯಲ್ಲಿ ನೆಮ್ಮದಿ ಎಲ್ಲಿರುತ್ತದೆ..?.
ಹೀಗಾಗಿ, ತಾಳ್ಮೆ ಯಾವ ಹೆಣ್ಣಲ್ಲಿ ಇರುತ್ತದೋ ಆಕೆ ಇರುವ ಮನೆ ನಂದನವನವಾಗಿರುತ್ತದೆ.. ಮಹಿಳೆಗೆ ತಾಳ್ಮೆ ಇದ್ದರೆ ಅದರ ಜೊತೆಗೆ ಆಕೆಗೆ ಧೈರ್ಯ ಹಾಗೂ ಬುದ್ಧಿವಂತಿಕೆ ಇರುತ್ತದೆ.. ಈ ಗುಣಗಳಿಂದಾಗಿ ಆ ಮಹಿಳೆ ಎಂತಹದ್ದೇ ಕಷ್ಟವನ್ನು ಸುಲಭವಾಗಿ ನಿಭಾಯಿಸುತ್ತಾಳೆ.. ಎಂತಹದ್ದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸುವ ಶಕ್ತಿ ಆಕೆಗಿರುತ್ತದೆ.. ಏನೇ ಸಮಸ್ಯೆಗಳಿದ್ದರೂ ಕುಟುಂಬವನ್ನು ಒಗ್ಗೂಡಿಸಿಕೊಂಡು ತಾಳ್ಮೆಯಿಂದ ಸಂಸಾರ ನಿಭಾಯಿಸುವ ಶಕ್ತಿ ಹೆಣ್ಣಿಗಿರಬೇಕು ಎಂದು ಚಾಣಕ್ಯ ಹೇಳುತ್ತಾನೆ.. ಹೆಂಡತಿ ತಾಳ್ಮೆ ಕಳೆದುಕೊಂಡರೆ ಮನೆ ನರಕವಾಗುತ್ತದೆ.. ದಿನವೂ ಮನೆಯಲ್ಲಿ ಜಗಳಗಳಾಗುತ್ತವೆ..

2. ಕುಟುಂಬ ನಿಭಾಯಿಸುವ ಶಕ್ತಿ;
ಈಗ ಮಹಿಳೆಯರೂ ಕೆಲಸಕ್ಕೆ ಹೋಗುತ್ತಿದ್ದರೂ, ಹೆಚ್ಚು ಜವಾಬ್ದಾರಿ ಹೊರುವವರು ಗಂಡಸರೇ ಆಗಿರುತ್ತಾರೆ.. ಹೀಗಾಗಿ ಮನೆಯ ನಿರ್ವಹಣೆಯ ಹೊಣೆ ಮಹಿಳೆಯ ಮೇಲೇ ಬಿದ್ದಿರುತ್ತದೆ.. ಕೆಲಸಕ್ಕೆ ಹೋಗುತ್ತಿದ್ದರೂ ಕೂಡಾ ಮಹಿಳೆ ಕೆಲಸದ ಜೊತೆಗೆ ಮನೆಯನ್ನೂ ನಿರ್ವಹಿಸುತ್ತಿರುತ್ತಾಳೆ.. ಹೀಗಾಗಿ ಮನೆಗೆ ಬರುವ ಹೆಂಡತಿ ಕುಟುಂಬವನ್ನು ನಿಭಾಯಿಸುವ, ಕುಟುಂಬದ ಸದಸ್ಯರನ್ನು ಸರಿಯಾಗಿ ನಿರ್ವಹಣೆ ಮಾಡುವ ಶಕ್ತಿ ಆಕೆಗಿರಬೇಕು.. ಮನೆ ಅಂದ ಮೇಲೆ ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ.. ಎಲ್ಲರ ಮನಸ್ಥಿತಿಗಳನ್ನೂ ಅರ್ಥ ಮಾಡಿಕೊಂಡು ಆಕೆ ನಿಭಾಯಿಸಬೇಕಾಗುತ್ತದೆ.. ಕುಟುಂಬದ ಅಗತ್ಯಗಳು, ಕುಟುಂಬದಲ್ಲಿನ ಸಮಸ್ಯೆಗಳು ಎಲ್ಲವನ್ನೂ ತಿಳಿದುಕೊಂಡು ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹಿಳೆ ಪಾತ್ರ ಬಹುಮುಖ್ಯವಾಗುತ್ತದೆ.. ಮನೆಯನ್ನು ಚೆನ್ನಾಗಿ ನೋಡಿಕೊಳ್ಳುವ, ಮನೆಯನ್ನು ಯಾವಾಗಲೂ ಸುಂದರವಾಗಿಡುವ, ಮನೆಯಲ್ಲಿ ಯಾವಾಗಲೂ ಸಂತೋಷವನ್ನು ಹರಡುವ ಕೆಲಸವನ್ನು ಮಹಿಳೆ ಮಾಡಬೇಕಾಗುತ್ತದೆ.. ಇಂತಹ ಹೆಂಡತಿ ಕುಟುಂಬಕ್ಕೆ ಸಂತೋಷ ಮತ್ತು ಶಾಂತಿಯನ್ನು ತರುತ್ತಾಳೆ ಎಂದು ಚಾಣಕ್ಯರು ತಿಳಿಸಿದ್ದಾರೆ.

3. ನೈತಿಕತೆಯುಳ್ಳ ಪತ್ನಿ;
ಸಾಂಸಾರಿಕ ಜೀವನದಲ್ಲಾಗಲೀ ಅಥವಾ ಸಾಮಾನ್ಯ ಜೀವನದಲ್ಲಾಗಲೀ ಮಹಿಳೆಗೆ ನೈತಿಕತೆ ಮುಖ್ಯವಾಗುತ್ತದೆ.. ಸಂಸಾರ ಅಂದರೆ ಅದು ನನ್ನದು.. ನಾನು ಅದನ್ನು ಚೆನ್ನಾಗಿ ನಿಭಾಯಿಸಬೇಕು.. ನಾನು ನೈತಿಕವಾಗಿರಬೇಕು ಅಂತ ತಿಳಿಯುವ ಹೆಣ್ಣು ಆ ಮನೆಯಲ್ಲಿ ಉದ್ಧಾರ ಮಾಡುತ್ತಾಳೆ.. ಹೆಂಡತಿಯ ಸ್ವಭಾವವು ಶುದ್ಧ ಮತ್ತು ನೈತಿಕವಾಗಿದ್ದರೆ ಅವಳು ಇಡೀ ಕುಟುಂಬಕ್ಕೆ ಮಾದರಿಯಾಗಿ ನಿಲ್ಲುತ್ತಾಳೆ.. ಅವಳು ತನ್ನ ಪತಿ ಮತ್ತು ಕುಟುಂಬವನ್ನು ಯಾವುದೇ ಪರಿಸ್ಥಿತಿಯಲ್ಲೂ ಬೆಂಬಲಿಸುವವಳಾದರೆ ಆ ಮನೆಯಲ್ಲಿ ಯಾವಾಗಲೂ ಸಂತೋಷ ನೆಲೆಸಿರುತ್ತದೆ. ಹೆಂಡತಿಯ ಆದರ್ಶ ನಡವಳಿಕೆಯಿಂದ ತನ್ನ ಪತಿ ಮತ್ತು ಕುಟುಂಬದ ಗೌರವವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ..

Share Post