LifestyleNational

3 ದಿನ ಮುಂಚೆಯೇ ಸೋಲೋಗಾಮಿ ಮದುವೆ; ಹನಿಮೂನ್‌ ಹೊರಟ ಕ್ಷಮಾ

ಗಾಂಧೀನಗರ; ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿ ಇಡೀ ದೇಶದಲ್ಲಿ ಸಖತ್ ಸುದ್ದಿಯಾಗಿದ್ದ ಯುವತಿ ಹೇಳಿದ ದಿನಕ್ಕಿಂತ ಮೂರು ದಿನ ಮುಂಚೆಯೇ ಮದುವೆ ಮುಗಿಸಿದ್ದಾಳೆ.

ವಡೋದರಾದ ಗೋತ್ರಿ ಪ್ರದೇಶದ ತನ್ನ ಮನೆಯಲ್ಲಿಯೇ ಕ್ಷಮಾ ಬಿಂದು ಮದುವೆ ನೆರವೇರಿದೆ. 40 ನಿಮಿಷಗಳ ಈ ಮದುವೆ ಸಮಾರಂಭದಲ್ಲಿ ಕೇವಲ ಆಪ್ತರು ಮಾತ್ರ ಭಾಗಿಯಾಗಿದ್ದರು. ಮಂಟಪಕ್ಕೆ ಬರುವ ವೇಳೆ ಕ್ಷಮಾ ಬಿಂದು ಮೇಲೆ ಸ್ನೇಹಿತರು ಹೂವಿನ ಮಳೆಯನ್ನು ಸುರಿಸುತ್ತಾ  ಸ್ವಾಗತ ಮಾಡಿದರು.

ಮದುವೆ ವೇಳೆ ಕೆಂಪು ಬಣ್ಣದ ಉಡುಪು ಧರಿಸಿ ವಧುವಿನ ಅಲಂಕಾರದಲ್ಲಿ ಮಿಂಚಿದ್ದ ಕ್ಷಮಾ ಬಿಂದು ಹಣೆಯಲ್ಲಿ ಸಿಂಧೂರ ಮತ್ತು ಕೊರಳಲ್ಲಿರುವ ತಾಳಿ ತೋರಿಸಿ ನನ್ನ ಮದುವೆ ಮುಗಿದು ಹೋಯಿತು. ಕೊನೆಗೂ ನಾನು ವಿವಾಹಿತ ಮಹಿಳೆಯಾಗಿರುವುದಕ್ಕೆ ಬಹಳ ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.

ಮದುವೆ ವೇಳೆ ನಡೆಸುವ ಮೆಹೆಂದಿ ಹಾಗೂ ಹಳದಿ ಶಾಸ್ತ್ರವನ್ನು ಕ್ಷಮಾ ಬಿಂದು ಮದುವೆಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ನಿರಂತರವಾಗಿ ಮನೆಗೆ ಅನೇಕ ಮಂದಿ ಭೇಟಿ ನೀಡುತ್ತಿದ್ದರಿಂದ ಅಕ್ಕಪಕ್ಕದ ಮನೆಯವರು ತಕರಾರು ತೆಗೆದಿದ್ದರು. ನನ್ನ ಮದುವೆ ದಿನ ಕೂಡ ಇದೇ ರೀತಿ ಗಲಾಟೆಗಳು ಆಗಬಹುದು ಎಂಬ ಕಾರಣಕ್ಕೆ 3 ದಿನ ಮುನ್ನವೇ ಮದುವೆಯಾಗಿರುವುದಾಗಿ ಕ್ಷಮಾ ಬಿಂದು ಹೇಳಿದ್ದಾಳೆ.

 

Share Post