LifestyleNational

ಫಸ್ಟ್‌ನೈಟ್‌ನಲ್ಲಿ ವಧುವಿನ ಆಧಾರ್‌ ಕೇಳಿದ ವರ!; ಯಾಕೆ ಗೊತ್ತಾ..?

ರಾಯ್ಪುರ; ಅವರಿಬ್ಬರ ಮದುವೆ ಮುಗಿದಿತ್ತು.. ಫಸ್ಟ್‌ನೈಟ್‌ ಒಂದು ಬಾಕಿ ಇತ್ತು.. ಆ ದಿನವೂ ಬಂದಿತ್ತು.. ಮೊದಲ ರಾತ್ರಿ ಕೊಠಡಿಯಲ್ಲಿ ವಧುವಿನ ಮುಖವನ್ನು ಹತ್ತಿರದಿಂದ ನೋಡಿದ ವರನಿಗೆ ಏನೋ ಅನುಮಾನ ಬಂದಿತ್ತು.. ಕೂಡಲೇ ಆತ ವಧುವಿನ ಜೊತೆ ಮಂಚವೇರುವ ಬದಲು ಆಕೆಯ ಆಧಾರ್‌ ಕಾರ್ಡ್‌ ಕೇಳಿದ್ದ.. ಅನಂತರ ನಡೆದಿದ್ದೇ ದೊಡ್ಡ ರಾದ್ಧಾಂತ.. ಇದೀಗ ಫಸ್ಟ್‌ ನೈಟ್‌ ಮಾಡಿಕೊಳ್ಳಲು ಸಜ್ಜಾಗಿದ್ದ ವಧು ಸೇರಿ ಏಳು ಮಂದಿ ಪೊಲೀಸರ ಅತಿಥಿಗಳಾಗಿದ್ದಾರೆ..
ಛತ್ತಿಸ್‌ಗಢದ ದುರ್ಗ ಎಂಬಲ್ಲಿ ಈ ಘಟನೆ ನಡೆದಿದೆ.. ಅಷ್ಟಕ್ಕೂ ಅಲ್ಲಿ ಏನು ನಡೀತು ಅನ್ನೋದನ್ನು ನೋಡೋಣ.. ಛತ್ತಿಸ್‌ಗಢ ದುರ್ಗ ಎಂಬ ಊರಿನ ಉದ್ಯಮಿ ಮಗನಿಗೆ ಜೈನ ಸಮುದಾಯದ ಹೆಣ್ಣು ಹುಡುಕುತ್ತಿದ್ದರು.. ಆತನಿಗೆ 43 ವರ್ಷವಾದರೂ ಹೆಣ್ಣು ಸಿಕ್ಕಿರಲಿಲ್ಲ.. ಹೀಗಾಗಿ ತಾವೇ ಖರ್ಚು ಮಾಡಿಕೊಂಡು ಮದುವೆ ಮಾಡಿಕೊಳ್ಳುತ್ತೇವೆ.. ಜೊತೆಗೆ ವಧುವಿನ ಮನೆಯವರಿಗೇ ಹಣ ನೀಡುತ್ತೇವೆ ಎಂದು ಉದ್ಯಮಿ ಹೇಳಿಕೊಂಡಿದ್ದರು.. ಇದೇ ವೇಳೆ ಇಂಧೋರ್‌ ಮೂಲದ ಏಜೆಂಟ್‌ ಸರಳಾ ಎಂಬಾಕೆ ಪೂರ್ವ ಭಾರತಿ ಎಂಬಾಕೆಯನ್ನು ತೋರಿಸಿದ್ದಳು.. ಆಕೆ ಪೋಷಕರು ಉದ್ಯಮಿಯಿಂದ ಬರೋಬ್ಬರಿ 17.5 ಲಕ್ಷ ರೂಪಾಯಿ ಕೇಳಿದ್ದರು.. ಉದ್ಯಮಿ ಮದುವೆಗೂ ಮುಂಚೆ ಆ ಹಣವನ್ನೂ ನೀಡಿದ್ದರು.. ಜೊತೆಗೆ ಸರಳಾಗೆ ಒಂದೂವರೆ ಲಕ್ಷ ರೂಪಾಯಿ ಕಮೀಷನ್‌ ನೀಡಿದ್ದರು..
ಅನಂತರ ವಧು ಇಂಧೋರ್‌ನಿಂದ ದುರ್ಗಕ್ಕೆ ಬಂದಿದ್ದಳು.. ಅಲ್ಲಿ ವಿವಾಹವನ್ನು ನೆರವೇರಿಸಲಾಯಿತು.. ಅನಂತರ ಫಸ್ಟ್‌ನೈಟ್‌ ಅರೇಂಜ್‌ ಮಾಡಲಾಗಿತ್ತು.. ಕೊಠಡಿಯನ್ನು ಅದ್ದೂರಿಯಾಗಿ ಅಲಂಕರಿಸಲಾಗಿತ್ತು.. ಕೊಠಡಿಯಲ್ಲಿ ಮುಖ ಮುಚ್ಚಿಕೊಂಡು ಕುಳಿತಿದ್ದ ವಧುವಿನ ಬಗ್ಗೆ ವರನಿಗೆ ಯಾಕೋ ಅನುಮಾನ ಬಂದಿದೆ.. ಕೂಡಲೇ ಆತ ಆಕೆಯ ಆಧಾರ್‌ ಕಾರ್ಡ್‌ ಕೇಳಿದ್ದಾನೆ.. ಆದ್ರೆ ಆಕೆ ಕೊಡೋದಕ್ಕೆ ಒಪ್ಪಿಲ್ಲ.. ಕೊನೆಗೆ ಬ್ಯಾಗ್‌ನಲ್ಲಿ ಪರೀಶೀಲನೆ ಮಾಡಿದಾಗ ಆಕೆ ಬೇರೆ ಸಮುದಾಯದವಳಾಗಿದ್ದು, ಮೋಸ ಮಾಡಲೆಂದೇ ಈ ಮದುವೆ ಮಾಡಿಕೊಳ್ಳಲಾಗಿದೆ ಅನ್ನೋದು ಅರ್ಥವಾಗಿದೆ.. ಕೊನೆಗೆ ವರ ಹಾಗೂ ಮನೆಯವರು ಸೇರಿ ಮೋಸ ಮಾಡಿದ ಎಲ್ಲರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ..

Share Post