CinemaHealth

ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಅವರ ಅಜ್ಜಿ ನಿಧನ

ಮೈಸೂರು; ಇಂಡಿಯನ್‌ ಮೈಕೆಲ್‌ ಜಾಕ್ಸನ್‌ ಎಂದೇ ಖ್ಯಾತರಾಗಿರುವ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ ಅವರ ಅಜ್ಜಿ ನಿಧನರಾಗಿದ್ದಾರೆ.. 96 ವರ್ಷ ವಯಸ್ಸಿನ ಪುಟ್ಟಮ್ಮಣ್ಣಿಯವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ರಾತ್ರಿ ಅವರು ನಿಧನ ಹೊಂದಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಿತು..

ಇದನ್ನೂ ಓದಿ; ಮಣ್ಣು ಕುಸಿದಿದ್ದರಿಂದ ಸಿಲುಕಿದ ಲಾರಿ!; ಜೆಸಿಬಿಯಿಂದ ತೆಗೆಯುವ ಪ್ರಪಾತಕ್ಕೆ ಲಾರಿ ಪಲ್ಟಿ!

ಪ್ರಭುದೇವ ಹಾಗೂ ಅವರ ಸಹೋದರ ನಾಗೇಂದ್ರ ಚೆನ್ನೈನಲ್ಲಿ ವಾಸವಿದ್ದಾರೆ.. ಅವರು ವಿಮಾನದಲ್ಲಿ ಚೆನ್ನೈನಿಂದ ಮೈಸೂರಿಗೆ ಆಗಮಿಸಿದ್ದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಪುಟ್ಟಮ್ಮಣ್ಣಿ ಅವರು ನಂಜನಗೂಡು ತಾಲ್ಲೂಕಿನ ದೂರ ಗ್ರಾಮದಲ್ಲಿ ವಾಸವಿದ್ದರು. ಸ್ವಗೃಹದಲ್ಲೇ ಅವರು ನಿಧನ ಹೊಂದಿದ್ದಾರೆ.

Share Post